ಪ್ರೀತಿ ಕುರುಡು ಪ್ರೇಮಕ್ಕೆ ಯಾವುದೇ ಕಣ್ಣಿಲ್ಲಾ ಅಂತಾರೆ. ಅಂದರೆ ಪ್ರೀತಿಗೆ ಜಾತಿ ಮುಖ್ಯವಾಗುವುದಿಲ್ಲ ಎರಡು ಮನಸ್ಸುಗಳು ಮಾತ್ರ ಮುಖ್ಯ ಅಂತ. ಆದರೆ, ಇತ್ತಿಚಿನ ದಿನಗಳಲ್ಲಿ ಪ್ರೇಮಿಗಳು ಸಾರ್ವಜನಿಕ ಸ್ಥಳಗಳಲೆಲ್ಲಾ ಹುಚ್ಚಾಟ ಮೆರೆದು ಪ್ರೀತಿಗಿರುವ ಗೌರವವನ್ನು ಕಳೆಯುತ್ತಿದ್ದಾರೆ.
ಹೌದು ಈ ಪ್ರೇಮಿಗಳು ಸಿಕ್ಕ ಸಿಕ್ಕ ಕಡೆಯಲ್ಲೇಲ್ಲಾ ಅಸಭ್ಯ ವರ್ತನೆ ತೋರಿ ಪ್ರೀತಿಗೆ ಅವಮಾನ ಮಾಡುತ್ತಿದ್ದಾರೆ. ಅದೇ ರೀತಿ ಇಲ್ಲೊಂದು ಕಡೆ, ಚಲಿಸುತ್ತಿದ್ದ ಬೈಕ್ ನಲ್ಲೇ ಜೋಡಿ ಹಕ್ಕಿ ರೊಮ್ಯಾನ್ಸ್ ಮಾಡಿದ್ದಾರೆ. ಈ ವೀಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದ್ದು ನೆಟ್ಟಿಗರು ಗರಂ ಆಗಿದ್ದಾರೆ.
ಈ ವಿಡಿಯೋದಲ್ಲಿ ಯುವತಿಯೂ ಬೈಕ್ ಮುಂಭಾಗದಲ್ಲಿ ತನ್ನ ಗೆಳೆಯನನ್ನು ಅಪ್ಪಿಕೊಂಡು ಕುಳಿತಿದ್ದಾಳೆ. ಇತ್ತ ಯುವಕನು ಬೈಕ್ ಓಡಿಸುತ್ತ ತನ್ನ ಪ್ರೇಮಿಯ ಜೊತೆಗೆ ರೊಮ್ಯಾನ್ಸ್ ಮಾಡುತ್ತಿದ್ದಾನೆ. ಚಲಿಸುತ್ತಿದ್ದ ಬೈಕ್ ನಲ್ಲೇ ಮೈ ಮರೆತು ಪ್ರೇಮಿಗಳಿಬ್ಬರೂ ರೊಮ್ಯಾನ್ಸ್ ಮಾಡುತ್ತಿರುವುದನ್ನು ಕಾಣಬಹುದು ಈ ದೃಶ್ಯ ಆಂಧ್ರ ಪ್ರದೇಶದ ವಿಜಯವಾಡ ನ್ಯಾಷನಲ್ ಹೈ ವೇ – 16 ರಾಮಲಿಂಗೇಶ್ವರ ನಗರ ಫ್ಲೈ ಓವರ್ ನಲ್ಲಿ ನಡೆದಿದೆ ಎನ್ನಲಾಗುತ್ತಿದೆ.