ಕೆಲವೊಬ್ಬರು ಮದುವೆಗೂ ಮುನ್ನ ತನ್ನ ಪ್ರೇಮಿಯನ್ನು ತುಂಬಾ ಪ್ರೀತಿ ಮಾಡುತ್ತಾರೆ. ಮದುವೆ ನಂತರ ಹಲವರು ಮೌನವಾಗುತ್ತಾರೆ. ಆದರೆ, ಹಲವರು ತಮ್ಮ ಸ್ನೇಹ ಮುಂದುವರೆಸುತ್ತಾರೆ. ಇಲ್ಲೊಬ್ಬ ವಿವಾಹಿತ, ಪ್ರೇಯಸಿಯ ಮನೆಯ ಬಾಲ್ಕಿನಿಯಿಂದ ಅರೆಬರೆ ಬಟ್ಟೆಯಲ್ಲಿ ಕೆಳಗೆ ಹಾರಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಆತನ ಪ್ರೇಯಸಿಗೆ ಆಗಲೇ ಮದುವೆಯಾಗಿತ್ತು. ಆದರೂ ಇಬ್ಬರ ಮಧ್ಯೆ ವಿವಾಹೇತರ ಸಂಬಂಧ ಇತ್ತು ಎನ್ನಲಾಗಿದೆ. ಹೀಗೆ ಇಬ್ಬರೂ ಒಂದಾಗಿದ್ದ ವೇಳೆ ಯಾವುದೇ ಸೂಚನೆ ಇಲ್ಲದೆ ಆಕೆಯ ಗಂಡ ಮನೆಗೆ ಬಂದಿದ್ದಾರೆ ಎನ್ನಲಾಗಿದೆ. ಆತನಿಂದ ತಪ್ಪಿಸಿಕೊಳ್ಳಲು ಈ ವ್ಯಕ್ತಿ ಯಾವ ಸ್ಥಿತಿಯಲ್ಲಿದ್ದನೋ ಅದೇ ಸ್ಥಿತಿಯಲ್ಲಿ ಬಾಲ್ಕನಿಯಿಂದ ಕೆಳಗೆ ಹಾರಿದ್ದಾನೆ. ಈ ವೀಡಿಯೋ ನೋಡಿದ ನೆಟ್ಟಿಗರಂತೂ ಇದೆಲ್ಲಾ ಬೇಕಿತ್ತಾ? ಆಕೆಯ ಗಂಡ ಇಬ್ಬರಿಗೂ ಚೆನ್ನಾಗಿ ಬಾರಿಸಬೇಕು ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.