ಪ್ರೇಯಸಿಗೆ ಹೆದರಿಸಲು ಹೋಗಿ ಪ್ರಿಯಕರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ವಿಜಯಪುರ ಜಿಲ್ಲೆಯ ಬೀಳಗಿ ತಾಲೂಕಿನ ನಿಂಗಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಜಯ್ ಹಾಗೂ ಪ್ರೇಯಸಿ ಇಬ್ಬರೂ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರ ನಿವಾಸಿಗಳು. ಕಳೆದ ಎರಡು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು.
ಆದರೆ, ಜ. 16ರಂದು ಅಜಯ್ ಹಾಗೂ ಪ್ರೇಯಸಿ ಸೇರಿ ಬೀಳಗಿ ತಾಲ್ಲೂಕಿನ ನಿಂಗಾಪುರದ ಸ್ನೇಹಿತ ನವೀನ್ ಮನೆಗೆ ಹೋಗಿದ್ದರು. ಆದರೆ, ಗೆಳೆಯನ ಮನೆಯಲ್ಲಿ ಪ್ರೇಯಸಿ ಮುಂದೆ, ಪ್ರಿಯಕರ ತನ್ನ ಗೆಳೆಯನೊಂದಿಗೆ ಸೇರಿಕೊಂಡು ಮದ್ಯ ಸೇವಿಸಿದ್ದಾನೆ. ಈ ವಿಷಯವಾಗಿ ಪ್ರೇಯಸಿ ಹಾಗೂ ಪ್ರಿಯಕರನ ಮನೆ ಜಗಳ ಶುರುವಾಗಿದೆ. ಆಗ ಯುವತಿ ಮರಳಿ ಊರಿಗೆ ಹೋಗುತ್ತೇನೆಂದು ಪಟ್ಟು ಹಿಡಿದಿದ್ದಾಳೆ. ಆಗ ಅಜಯ್ ಸ್ನೇಹಿತ ನವೀನ್ ಮುಧೋಳಕ್ಕೆ ಬಿಟ್ಟು ಬರುತ್ತೇನೆಂದು ಬೈಕ್ ಮೇಲೆ ಕರೆದುಕೊಂಡು ಹೋಗುತ್ತಿದ್ದ. ಆಗ ಅಜಯ್ ವಿಡಿಯೊ ಕಾಲ್ ಮಾಡಿ ಮರಳಿ ಬರದಿದ್ದರೆ ನೇಣು ಹಾಕಿಕೊಂಡು ಸಾಯುವುದಾಗಿ ಹೇಳಿದ್ದಾನೆ. ಇದರಿಂದ ಗಾಬರಿಗೊಂಡ ಪ್ರೇಯಸಿ ಹಾಗೂ ನವೀನ್ ಮರಳಿ ಬರುವಷ್ಟರಲ್ಲಿ ಅಜಯ್ ನೇಣು ಹಾಕಿಕೊಂಡಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲು ಯತ್ನಿಸಲಾಗಿದೆ. ಆದರೆ, ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ. ಘಟನೆಯಿಂದ ಗಾಬರಿಗೊಂಡ ಸ್ನೇಹಿತ ನವೀನ್, ಅಜಯ್ ಶವ ಹಾಗೂ ಯುವತಿಯನ್ನು ಬಿಟ್ಟು ಓಡಿ ಹೋಗಿದ್ದಾನೆ. ಸದ್ಯ ಬೀಳಗಿ ಪೊಲೀಸರು ಸದ್ಯ ಪ್ರೇಯಿಸಿ ಹಾಗೂ ಮೃತ ಅಜಯ್ ಗೆಳೆಯ ನವೀನ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.