ಹುಬ್ಬಳ್ಳಿ: ಜಿಮ್ ಸೆಂಟರ್‌ಗಳು ಈಗ ಲವ್ ಜಿಹಾದ್ ಕೇಂದ್ರಗಳಾಗುತ್ತಿದೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳು ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ ಘಟನೆ ಹಳೆ ಹುಬ್ಬಳ್ಳಿ ನಗರದ ಪೊಲೀಸ್ ಠಾಣೆ ಎದುರು ನಡೆದಿದೆ.
ಯುವತಿಯ ತಲೆ ಕೆಡಿಸಿ ಲವ್ ಜಿಹಾದ್ ಮಾಡಲಾಗುತ್ತಿದೆ ಎಂದು ಆರೋಪಿಸಿ ಹಳೆ ಹುಬ್ಬಳ್ಳಿಯಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ವಿಜಯನಗರ ನಿವಾಸಿಯಾದ ಜಿಮ್ ಟ್ರೈನರ್ ಸಮೀರ್‌ನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಯುವಕನನ್ನು ಪೊಲೀಸರಿಗೆ ಒಪ್ಪಿಸಿದ್ದಕ್ಕೆ ಯುವಕನ ಕುಟುಂಬ ಯುವತಿ ಮನೆಗೆ ನುಗ್ಗಿ ಗಲಾಟೆ ಮಾಡಿ, ಯುವತಿಯ ಕುಟುಂಬದವರ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ.
ಈಗ ಜಿಮ್‌ಗಳು ಲವ್ ಜಿಹಾದ್ ಕೇಂದ್ರಗಳಾಗುತ್ತಿವೆ. ಉದ್ದೇಶಪೂರ್ವಕವಾಗಿಯೇ ಹಿಂದೂ ಹುಡುಗಿಯರನ್ನು ಗುರಿಯಾಗಿಸಿ ಅವರ ತಲೆ ಕೆಡಿಸಲಾಗುತ್ತಿದೆ. ಆತ ಈಕೆಯ ಜೊತೆ ಮಾತ್ರವಲ್ಲ. ಇನ್ನು 5-6 ಹುಡುಗಿಯರ ಜೊತೆ ಆತನ ಫೋಟೋ ಇದೆ. ಪ್ರಶ್ನೆ ಮಾಡಿದ್ದಕ್ಕೆ ವಿಡಿಯೋ, ಫೋಟೋ ರಿಲೀಸ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಕ್ರಿಯಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಹಳೇ ಹುಬ್ಬಳ್ಳಿ ಠಾಣೆಗೆ ಹಿಂದೂಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಟ್ರೈನರ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಸ್ಥಳಕ್ಕೆ ಕಮಿಷನರ್ ಎನ್ ಶಶಿಕುಮಾರ್ ಭೇಟಿ ನೀಡಿದ್ದು ಹಿಂದೂ ಕಾರ್ಯಕರ್ತರ ಜೊತೆಗೆ ಮಾತುಕತೆ ನಡೆಸುತ್ತಿದ್ದಾರೆ.
ಸಮೀರ್ ಸಹೋದರಿ ಪ್ರತಿಕ್ರಿಯಿಸಿ, ಯುವತಿ ಕಾಲೇಜು ಮುಗಿಸಿ ಮೂರು ವರ್ಷದಿಂದ ಜಿಮ್‌ಗೆ ಹೋಗುತ್ತಿದ್ದಳು. ಇಲ್ಲಿ ಸಮೀರ್ ಪರಿಚಯವಾಗಿತ್ತು. ಯುವತಿ ಮತ್ತು ನನ್ನ ಸಹೋದರ ಕಳೆದ 3 ವರ್ಷಗಳಿಂದ ಸಂಬಂಧದಲ್ಲಿದ್ದಾರೆ. ಆಕೆ ನಮ್ಮ ಮನೆಗೆ ಬರುತ್ತಿದ್ದಳು. ಈ ಹಿಂದೆ ಇವರಿಬ್ಬರೂ ಜೊತೆಯಾಗಿ ಗೋವಾಗೆ ಹೋಗಿದ್ದರು. ಇಬ್ಬರು ಸಂಬಂಧದಲ್ಲಿರುವುದು ಆಕೆ ಮನೆಯವರಿಗೂ ತಿಳಿದಿದೆ ಎಂದು ತಿಳಿಸಿದ್ದಾರೆ. ಇತ್ತೀಚಿಗೆ ನಾವು ಶಾಪಿಂಗ್ ಮಾಡಿದ್ದೆವು. ಶಾಪಿಂಗ್ ಮಾಡುವಾಗಲೂ ಆಕೆ ನಮ್ಮ ಜೊತೆ ಬಂದಿದ್ದಳು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬಂಗಾಳದಲ್ಲಿ ಜಡ್ಜ್‌ಗಳ ಒತ್ತೆ ಪ್ರಕರಣದ ಮಾಸ್ಟರ್ ಮೈಂಡ್, ಎಐಎಂಐಎಂ ನಾಯಕ ಬಾಗ್ಡೋಗ್ರಾದಲ್ಲಿ ಬಂಧನ



















