ಬೆಂಗಳುರು: ರಾಜಧಾನಿಯಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವ ಘಟನೆ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ನಡೆದಿದೆ.
ಮೊಹಮದ್ ಇಶಾಕ್ ನಂಬಿಸಿ ಮೊಸ ಮಾಡಿರುವ ಮುಸ್ಲಿಂ ಯುವಕ, 2024ರ ಅ.17ರಂದು ಇನ್ಸ್ಟಾ ಮೂಲಕ ಪರಿಚಯವಾಗಿ ಪ್ರೀತಿ, ಪ್ರೇಮದ ಮೆಸೇಜ್ ಮಾಡಿ, ಮನೆಯವರ ಜೊತೆ ಮಾತನಾಡಿ ಮದುವೆ ಆಗುತ್ತೀನಿ ಎಂದು ನಂಬಿಸಿ, ಪದೇಪದೆ ದೈಹಿಕವಾಗಿ ಬಳಸಿಕೊಂಡಿದ್ದ ಎಂದು ಆರೋಪಿಸಲಾಗಿದೆ.

ಬಳಿಕ ಆತನಿಗೆ ಬೇರೆ ಹುಡುಗಿಯರ ಪರಿಚಯ ಇರುವುದು ಯುವತಿಗೆ ತಿಳಿದಿದೆ ಹಾಗೂ 2025ರ ಸೆ.14ರಂದು ಮುಸ್ಲಿಂ ಯುವತಿ ಜೊತೆ ಎಂಗೇಜ್ಮೆಂಟ್ ಆಗಿರುವ ವಿಚಾರ ತಿಳಿದು ಯುವಕನಿಗೆ ಪ್ರಶ್ನೆ ಮಾಡಿದ್ದ ಯುವತಿಹಗೆ, ನಿನ್ನ ದಾರಿ ನೀನು ನೋಡಿಕೋ ಎಂದು ಹೇಳಿದ್ದಾನೆ. ನಂತರ ಕರೆ ಮಾಡಿದರೆ ನಿನ್ನ ಕೊಲೆ ಮಾಡುತ್ತೇನೆ ಎಂದು ಯುವತಿಗೆ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ಯುವತಿ ತಿಳಿಸಿದ್ದಾಳೆ.

ಸದ್ಯ ಈ ಸಂಬಂಧ ಹೆಚ್‌ಎಸಾರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.