‘ಲವ್ ಕೇಸ್’ ಚಿತ್ರದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಜೈಶ್ ನಿರ್ದೇಶನದ ಈ ಚಿತ್ರವನ್ನ ಎಂ.ಬಿ ಕ್ರಿಯೇಷನ್ಸ್ ಮೋಹನ್ ಬಾಬು ನಿರ್ಮಾಣ ಮಾಡ್ತಿದ್ದಾರೆ.
ಶ್ರೀನಗರ ಕಿಟ್ಟಿ, ಪ್ರಮೋದ್ ಶೆಟ್ಟಿ, ಸುಧಾರಾಣಿ, ನಾಗಭೋಷಣ್ ,ಮಹಾನಟಿ ಖ್ಯಾತಿಯ ವಂಶಿ, ಸ.ಹಿ.ಪ್ರಾ. ಶಾಲೆ ಕಾಸರಗೂಡು ಹಾಗೂ ಕಾಂತಾರ ರಂಜನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಆದಿ ಹರಿಕೃಷ್ಣ ಸಂಗೀತ , ಕೆ.ಎಸ್ ಚಂದ್ರಶೇಖರ್ ಛಾಯಾಗ್ರಹಣ , ಅನುಕೃಷ್ಣ ಸಂಕಲನವಿರೋ ಈ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದ್ದು, ಸದ್ಯಕ್ಕೆ ಎರಡನೇ ಹಂತದ ಚಿತ್ರೀಕರಣ ಮುಗಿಸಿದೆ. ಸದ್ಯದಲ್ಲೇ ಕೊನೆಯ ಹಂತದ ಚಿತ್ರೀಕರಣಕ್ಕಾಗಿ ಮಂಗಳೂರಿನತ್ತ ಹೊರಡಲಿದೆ. ಎಲ್ಲಾ ಅಂದುಕೊಂಡಂತೆ ಆದ್ರೆ ಯುಗಾದಿ ತೆರೆಗೆ ತರಲು ಚಿತ್ರತಂಡ ಸಜ್ಜಾಗ್ತಿದೆ.
ಇದನ್ನೂ ಓದಿ : ವರ್ಷದ ಮೊದಲ ದಿನವೇ ರಾಯರವಾರ | ಮಂತ್ರಾಲಯಕ್ಕೆ ಹರಿದು ಬಂದ ಭಕ್ತಸಾಗರ!



















