ರಾಯಚೂರು: ಅಕ್ರಮವಾಗಿ ರಸಗೊಬ್ಬರ ಸಾಗಾಟ ಮಾಡುತ್ತಿದ್ದ ಲಾರಿಯನ್ನು ತಡೆದು ಜಾಗೃತ ದಳದ ಸಿಬ್ಬಂದಿಗಳು ತಪಾಸಣೆ ನಡೆಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ದಡೆಸುಗೂರು ಗ್ರಾಮದ ಬಳಿ ನಡೆದಿದೆ.
ಸಿಂಧನೂರಿನಿಂದ ತಮಿಳುನಾಡಿಗೆ ಸಾಗಿಸಲಾಗುತ್ತಿದ್ದ ರಸಗೊಬ್ಬರ ಲಾರಿಯನ್ನು ತಡೆದು ತಪಾಸಣೆ ನಡೆಸಿದ ವೇಳೆ ರಸಗೊಬ್ಬರ ಇರುವುದು ಪತ್ತೆಯಾಗಿದೆ.
ಜಾಗೃತ ದಳದ ಸಿಬ್ಬಂದಿಗಳು ತಪಾಸಣೆ ನಡೆಸಿ ಕೃಷಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಕೃಷಿ ಅಧಿಕಾರಿಗಳು ಲಾರಿ ವಶಕ್ಕೆ ಪಡೆದು ಸಿಂಧನೂರು ಗ್ರಾಮಾಂತರ ಠಾಣೆಗೆ ಒಪ್ಪಿಸಿದ್ದಾರೆ. ಸದ್ಯ ಮಾಲೀಕರಿಗೆ ರಸಗೊಬ್ಬರದ ಬಿಲ್ ತೋರಿಸುವಂತೆ ಸೂಚನೆ ನೀಡಿದ್ದಾರೆ. ಲಾರಿಯಲ್ಲಿದ್ದ ರಸಗೊಬ್ಬರವನ್ನು ಎಪಿಎಂಸಿ ಕಚೇರಿಯಲ್ಲಿ ದಾಸ್ತಾನು ಮಾಡಲಾಗಿದ್ದು, ರಸಗೊಬ್ಬರದ ದಾಖಲೆ ತೋರಿಸದಿದ್ದರೆ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ಮಂಗಳೂರು | ಶಾಲಾ ಬಸ್‌ಗೆ ಮೀನು ಸಾಗಾಟದ ಕ್ಯಾಂಟರ್ ಡಿಕ್ಕಿ ; 7 ವಿದ್ಯಾರ್ಥಿಗಳಿಗೆ ಗಾಯ



















