ದೇಶದ ಶ್ರೀಮಂತ ನಟಿ ಯಾರು ಎಂದರೆ ಸಾಕು, ಹಲವರು ಸದ್ಯ ಭಾರೀ ಬೇಡಿಕೆಯಲ್ಲಿರುವ ನಟಿಯರ ಹೆಸರುಗಳನ್ನು ಊಹಿಸಬಹುದು. ಆದರೆ, ಅವರಾರು ಅಲ್ಲ. ಭಾರತದ ಶ್ರೀಮಂತ ನಟಿ ಬಾಲಿವುಡ್ ನ ಹಿರಿಯ ನಟಿ ಜೂಹಿ ಚಾವ್ಲಾ.
ಈ ಹಿರಿಯ ಹಾಗೂ ಶ್ರೀಮಂತ ನಟಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಇವರು ಕೇವಲ ಬಾಲಿವುಡ್ ನಲ್ಲಿ ಮಾತ್ರವಲ್ಲ ಇಡೀ ಭಾರತದಲ್ಲಿ ನಂಬರ್ 1 ಶ್ರೀಮಂತ ನಟಿ ಎನಿಸಿಕೊಂಡಿದ್ದಾರೆ. ಅಲ್ಲದೇ, ಇವರ ಆಸ್ತಿ ಹಿರಿಯ ನಟ ಅಮಿತಾಭ್ ಬಚ್ಚನ್ ಅವರಿಗಿಂತಲೂ ಹೆಚ್ಚಾಗಿದೆ ಎಂದರೆ ನೀವು ನಂಬಲೇಬೇಕು.
90ರ ದಶಕದ ನಟಿಯ ಆಸ್ತಿ ಬರೋಬ್ಬರಿ 4600 ಕೋಟಿ ರೂ. ನಟಿ ಜೂಹಿ ಚಾವ್ಲಾ 1986ರಿಂದ ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟರು. ಕನ್ನಡ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಪ್ರೇಮ ಲೋಕ ಚಿತ್ರದಲ್ಲಿ ರವಿಚಂದ್ರನ್ ಅವರೊಂದಿಗೆ ನಟಿಸಿ ಇಂದಿಗೂ ಪ್ರೇಮಿಗಳಿಗೆ ಆದರ್ಶವಾಗಿದ್ದಾರೆ. ಆನಂತರ ಕನ್ನಡದ ಕಿಂದರಿ ಜೋಗಿ ಚಿತ್ರದಲ್ಲೂ ನಟಿಸಿದ್ದಾರೆ. ಅವರು ಸಿನಿಮಾ ರಂಗದಿಂದ ದೂರ ಇದ್ದರೂ ಅವರು ಆಸ್ತಿ ಮಾತ್ರ ಏರುತ್ತಲೇ ಇದೆ. ಕಾರಣ ಅವರು ಉದ್ಯಮವನ್ನೂ ನಡೆಸುತ್ತಿದ್ದು, ಆಸ್ತಿ ಏರಿಕೆಯಾಗುತ್ತ ಸಾಗುತ್ತಿದೆ.
‘ಹುರುನ್ ರಿಚ್ ಲಿಸ್ಟ್ 2024’ರಲ್ಲಿ ಜೂಹಿ ಚಾವ್ಲಾ ಹೆಸರು ಪಡೆದಿದ್ದಾರೆ. ಶಾರುಖ್ ಖಾನ್ 7 ಸಾವಿರ ಕೋಟಿ ರೂ. ಆಸ್ತಿ ಹೊಂದಿದರೆ, ಜುಹಿ 4 ಸಾವಿರ ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಜೂಹಿ ಅವರು ಶಾರುಖ್ ಖಾನ್ ಜೊತೆ ಸಾಕಷ್ಟು ವೆಂಚರ್ ಗಳಲ್ಲಿ ಪಾಲುದಾರರಾಗಿದ್ದಾರೆ. ಹೀಗಾಗಿ ಇವರ ಆಸ್ತಿ ಏರಿಕೆಯಾಗಿದೆ.
ಶಾರುಖ್ ಖಾನ್ ಒಡೆತನದ ‘ರೆಡ್ ಚಿಲ್ಲೀಸ್ ಗ್ರೂಪ್’ನ ಸಹ ಸಂಸ್ಥಾಪಕಿ ಆಗಿದ್ದಾರೆ. ‘ಕೋಲ್ಕತ್ತಾ ನೈಟ್ ರೈಡರ್ಸ್’ನ ಸಹ ಮಾಲಕಿ ಆಗಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಸಾಕಷ್ಟು ಹೂಡಿಕೆ ಮಾಡಿದ್ದಾರೆ. ಅವರ ಪತಿ ಜಯ್ ಮೆಹ್ತಾ ಕೂಡ ಉದ್ಯಮಿಯಾಗಿದ್ದು, ಇವರ ಆಸ್ತಿ ಏರಿಕೆಯಾಗಲು ಕಾರಣವಾಗಿದೆ.
ಶ್ರೀಮಂತ ನಟಿಯರ ಸಾಲಿನಲ್ಲಿ ಜೂಹಿ ಚಾವ್ಲಾ ಮೊದಲ ಸ್ಥಾನದಲ್ಲಿದ್ದರೆ, ಐಶ್ವರ್ಯಾ ರೈ (850 ಕೋಟಿ ರೂಪಾಯಿ) ನಂತರದ ಸ್ಥಾನದಲ್ಲಿದ್ದಾರೆ. ಪ್ರಿಯಾಂಕಾ ಚೋಪ್ರಾ (650 ಕೋಟಿ ರೂಪಾಯಿ) ಮೂರನೇ ಸ್ಥಾನದಲ್ಲಿದ್ದಾರೆ.