ಬೆಂಗಳೂರು | ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ & ಕಾಮಿಡಿ ಕಿಲಾಡಿಗಳು ಜೂನಿಯರ್ಸ್ ಮಹಾ ಸಂಗಮದಲ್ಲಿ ಅಮೋಘ್ ಮಿಂಚಿದ್ದಾರೆ. ಹೌದು.. ಜೀ ಕನ್ನಡದ ಜನಪ್ರಿಯ ಶೋಗಳಾದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಹಾಗೂ ‘ಕಾಮಿಡಿ ಕಿಲಾಡಿಗಳು ಜೂನಿಯರ್ಸ್’ ಈಗಾಗಲೇ ವೀಕ್ಷಕರ ಮನಗೆದ್ದಿವೆ. ಇದೀಗ ಈ ಎರಡೂ ಶೋಗಳ ‘ಮಹಾ ಸಂಚಿಕೆ’ ಪ್ರಸಾರವಾಗುತ್ತಿದ್ದು, ಇದರಲ್ಲಿ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಖ್ಯಾತಿಯ ಸುಬ್ಬು ಅಲಿಯಾಸ್ ಅಮೋಘ್ ವಿಶೇಷ ಆಕರ್ಷಣೆಯಾಗಿದ್ದಾರೆ.
ಚಂದನವನದ ದಿಗ್ಗಜರಾದ ಡಾ. ಶಿವರಾಜ್ ಕುಮಾರ್, ‘ಡಿಂಪಲ್ ಕ್ವೀನ್’ ರಚಿತಾ ರಾಮ್ ಹಾಗೂ ನಿಶ್ವಿಕಾ ನಾಯ್ಡು ಅಮೋಘ್‌ನ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ. ಅಮೋಘ್‌ನ ಅದ್ಭುತ ನಟನೆಗೆ ಫಿದಾ ಆದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಅಮೋಘ್‌ನ ಚೊಚ್ಚಲ ಸಿನಿಮಾವನ್ನು ನಾನೇ ನಿರ್ಮಾಣ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಇದೇ ವೇಳೆ ಮಾತನಾಡಿದ ನಟಿ ರಚಿತಾ ರಾಮ್, ಅಮೋಘ್ ನಾಯಕನಾಗುವ ಸಿನಿಮಾಗೆ ತಾನೇ ನಾಯಕಿಯಾಗುವುದಾಗಿ ಸಂಭ್ರಮದಿಂದ ಹೇಳಿದ್ದಾರೆ. ನಟಿ ನಿಶ್ವಿಕಾ ನಾಯ್ಡು ಅಮೋಘ್‌ನ ಸಾಧನೆಯನ್ನು ಮೆಚ್ಚಿ, ಜೀವನದಲ್ಲಿ ನೀನು ಇನ್ನಷ್ಟು ಎತ್ತರಕ್ಕೆ ಬೆಳೆಯುವೆ ಎಂದು ಶುಭ ಹಾರೈಸಿದ್ದಾರೆ.
ಇದನ್ನೂ ಓದಿ : ಕೋಲಾರದಲ್ಲಿ ಹಿಂದೂ ಮುಖಂಡರ ಕಾರ್ಯಾಚರಣೆ | ಕಂಟೇನರ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 37 ಗೋವುಗಳ ರಕ್ಷಣೆ!



















