ಕೊಪ್ಪಳ: ಕೊಪ್ಪಳದ ಕರ್ನಾಟಕ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಮಾಜಿ ಹೊರಗುತ್ತಿಗೆ ನೌಕರ ಕಳಕಪ್ಪ ಅವರ ಮನೆಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಕೊಪ್ಪಳ ಲೋಕಾಯುಕ್ತ ಅಧಿಕಾರಿಗಳಿಂದ ಕೊಪ್ಪಳದ ಪ್ರಗತಿ ನಗರದಲ್ಲಿರುವ ಮನೆ ಮೇಲೆ ದಾಳಿ ನಡೆಸಲಾಗಿದೆ.
ಚರಂಡಿ, ಕುಡಿಯೋ ನೀರು ಕಾಮಗಾರಿಯಲ್ಲಿ72 ಕೋಟಿ ರೂ. ಅಕ್ರಮವೆಸಗಿರುವ ಆರೋಪದ ಹಿನ್ನಲೆ ಝಡ್ ಚಿಂಚೋಳಿಕರ್, ಹೊರಗುತ್ತಿಗೆ ನೌಕರ ಕಳಕಪ್ಪ ವಿರುದ್ದ ಕಳೆದ ವಾರ ಕೆಆರ್‌ಡಿಎಲ್ ಅಧಿಕಾರಿಗಳು ದೂರು ನೀಡಿದ್ದರು.
ಆ ಬಳಿಕ ಹೊರಗುತ್ತಿಗೆ ನೌಕರ ಕಳಕಪ್ಪನನ್ನು ಕಳೆದ ಕೆಲವು ದಿನಗಳ ಹಿಂದೆ ಅಧಿಕಾರಿಗಳು ಕೆಲಸದಿಂದ ತೆಗೆದಿದ್ದರು.



















