ಬೆಂಗಳೂರು ಗ್ರಾಮಾಂತರ: ಮುಡಾ ವಿಚಾರದಲ್ಲಿ ಲೋಕಾಯುಕ್ತರು ತರಾತುರಿಯಲ್ಲಿ ಬಿ ರಿಪೋರ್ಟ್ ನೀಡಿದ್ದಾರೆ ಎಂದು ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ.
ದೇವನಹಳ್ಳಿಯಲ್ಲಿ ಸುದ್ದಿಗಾರೊರಂದಿಗೆ ಮಾತನಾಡಿದ ಅವರು, ಮೂಡ ವಿಚಾರದಲ್ಲಿ ಲೋಕಾಯುಕ್ತ ತರಾತುರಿಯಲ್ಲಿ ಬಿ ರಿಪೋರ್ಟ್ ಕೊಟ್ಟಿದೆ. ಒಂದು ಕಾಲದಲ್ಲಿ ಸಿದ್ದರಾಮಣ್ಣನವರು ಮಂತ್ರಿಯಾಗಿದ್ದಾಗ ಎಸಿಬಿಗೆ ಶಕ್ತಿ ನೀಡಿದ್ದರು. ಈಗ ಹಾವಿನ ಹಲ್ಲನ್ನು ಕಿತ್ತು ಹಾಕಿ ಹಾವು ಬಿಡುವ ಕಾರ್ಯ ಮಾಡುತ್ತಿದ್ದಾರೆ. ಹಲ್ಲು ಕಿತ್ತ ಹಾವು ಆದಂತೆ ಲೋಕಾಯುಕ್ತವಾಗಿದೆ ಎಂದು ಹೇಳಿದ್ದಾರೆ.
ಈಗಿನ ಮುಖ್ಯಮಂತ್ರಿಗಳು ಲೋಕಾಯುಕ್ತಕ್ಕೆ ಗೌರವ ಕೊಡದೆ ಕಿತ್ತು ಹಾಕಿದ್ದರು. ಆದರೆ, ಈಗ ಅದೇ ಲೋಕಾಯುಕ್ತದಿಂದಲೇ ರಕ್ಷಣೆ ಪಡೆಯುವಂತಾಗಿದೆ. ಲೋಕಾಯುಕ್ತದಿಂದ ತರಾತುರಿಯಲ್ಲೇ ರಿಪೋರ್ಟ್ ಹಾಕಿಸಿಕೊಂಡಿದ್ದಾರೆ. ಹಿಂದೆ ಸಂತೋಷ ಹೆಗ್ಡೆ ಅವರು ಭ್ರಷ್ಟರನ್ನು ಇದೇ ಇಲಾಖೆಯಿಂದ ಬೇಟೆಯಾಡಿದನ್ನು ನಾವೆಲ್ಲ ನೋಡಿದ್ದೇವೆ. ಅವರು ಪಾರದರ್ಶಕವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದರು. ಆದರೆ, ಮುಡಾ ಕೇಸ್ ವಿಚಾರದಲ್ಲಿ ಲೋಕಾಯುಕ್ತದ ನಡೆ ಪ್ರಶ್ನೆ ಮಾಡುವಂತಿದೆ ಎಂದು ಹೇಳಿದ್ದಾರೆ.