ಬೆಂಗಳೂರು : ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ ಸರ್ದಾರ್ ಸರ್ಫರಾಝ್ ಖಾನ್ ಅವರ ನಿವಾಸ ಸಹಿತ ಹತ್ತು ಕಡೆ ಲೋಕಾಯುಕ್ತ ಅಧಿಕಾರಿಗಳು ಇಂದು ದಾಳಿ ನಡೆಸಿದ್ದು, ಈ ವೇಳೆ ಬರೋಬ್ಬರಿ 14 ಕೋಟಿ 38 ಲಕ್ಷ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.
ಸರ್ಫರಾಝ್ ಖಾನ್ ವಸತಿ ಇಲಾಖೆಗೆ ನಿಯೋಜನೆಗೊಂಡಿರುವ ಅಧಿಕಾರಿಯಾಗಿದ್ದು, ಅವರ ವಿರುದ್ಧ ಅಕ್ರಮ ಆಸ್ತಿ ಗಳಿಕೆಯ ಕುರಿತು ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 50ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ನಡೆಸಿದ್ದರು.
ಬೆಂಗಳೂರಿನ ಹಲಸೂರು ನಿವಾಸ, ಇತರ ಆರು ಮನೆಗಳು ಸೇರಿದಂತೆ ಒಟ್ಟು ಏಳು ಮನೆಗಳು, ಕೊಡಗಿನಲ್ಲಿರುವ ಎರಡು ಕಾಫಿ ಎಸ್ಟೇಟ್‌ಗಳು ಮತ್ತು ಎಚ್.ಡಿ.ಕೋಟೆಯಲ್ಲಿನ ಒಂದು ರೆಸಾರ್ಟ್ ಮೇಲೆ ಏಕಕಾಲಕ್ಕೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಪರಿಶೀಲನೆ ನಡೆಸಿದ್ದು, ಈ ವೇಳೆ ಅಕ್ರಮ ಆಸ್ತಿಗಳು ಪತ್ತೆಯಾಗಿದೆ. ಸದ್ಯ ಕೆಲ ಕಡತಗಳ ವಶಕ್ಕೆ ಪಡೆದಿರುವ ಲೋಕಾಯುಕ್ತ ಅಧಿಕಾರಿಗಳು, ತನಿಖೆ ಮುಂದುವರೆಸಿದ್ದಾರೆ.
ದಾಳಿ ವೇಳೆ ಪತ್ತೆಯಾದ ಸ್ಥಿರ ಆಸ್ತಿಯ ವಿವರ
4 ವಾಸದ ಮನೆಗಳು, 37 ಎಕರೆ ಕೃಷಿ ಜಮೀನು ಮನೆ ಹಾಗೂ ಕೃಷಿ ಜಮೀನಿನ ಮೌಲ್ಯ – 8.44,33,500/-
ಚರ ಆಸ್ತಿಯ ವಿವರ
66.500/- ನಗದು
2,99,70,500/ ಚಿನ್ನಾಭರಣ
1,64,20,000/- ಬೈಕ್ ಹಾಗೂ ಕಾರ್‌ಗಳು.
1.29.29.153/- ಬ್ಯಾಂಕ್ ಠೇವಣಿ
ಒಟ್ಟು ಮೌಲ್ಯ ರೂ 5.93.86.153
ಸ್ಥಿರ ಆಸ್ತಿ ಹಾಗೂ ಚರ ಆಸ್ತಿ ಯ ಒಟ್ಟು ಮೌಲ್ಯ. 14 ಕೋಟಿ 38 ಲಕ್ಷಕ್ಕೂ ಅಧಿಕ.
ಇದನ್ನೂ ಓದಿ : ಸಿದ್ದರಾಮಯ್ಯ ಅಧಿಕಾರ ಕೊಡಲ್ಲ, ಡಿಕೆಶಿ ದೇವಸ್ಥಾನ ಬಿಡಲ್ಲ | ಆರ್.ಅಶೋಕ್ ವ್ಯಂಗ್ಯ



















