ಬೆಂಗಳೂರು: ಸಚಿವ ಜಮೀರ್ ಅಹಮದ್ ಖಾನ್ ಮೇಲೆ ಲೋಕಾಯುಕ್ತ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟಿ ಕೋಟಿ ಹಣ ವ್ಯವಹಾರದ ಆರೋಪ ಕೇಳಿಬಂದಿದ್ದು, ಸದು ಲೋಕಾ ಕೆಜಿಎಫ್ ಬಾಬುರನ್ನು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ.
KGF ಬಾಬು ಸಚಿವ ಜಮೀರ್‌ಗೆ ನಾಲ್ಕು ಕೋಟಿ ರೂ. ನೀಡಿದ್ದರು. ಬಾಬು ಅವರಿಂದ ಪಡೆದ ಸಾಲ ಸಂಬಂಧದಿಂದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಲೋಕಾಯುಕ್ತ ಅಧಿಕಾರಿಗಳು ಕೆಜಿಎಫ್ ಬಾಬು ಅವರನ್ನು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೆ ತಂದಿದ್ದಾರೆ. ಇಂದು ವಿಚಾರಣೆಗೆ ಬಾಬು ಹಾಜರಾಗಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಚಂದ್ರು ಲಮಾಣಿ ವಿರುದ್ಧ ಷಡ್ಯಂತ್ರ ನಡೆದಿದೆ | ಬೊಮ್ಮಾಯಿ



















