ದಾವಣಗೆರೆ : ನಗರದಲ್ಲಿ ಕೇವಲ 15 ದಿನಗಳ ಹಿಂದೆ ನಿರ್ಮಿಸಲಾದ ಚರಂಡಿ ಮಳೆಗೆ ಕಿತ್ತುಹೋದ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನಗರದ ಎಸ್.ಎಸ್. ಲೇಔಟ್ ಪ್ರದೇಶದಲ್ಲಿ ರಾತ್ರಿ ಸುರಿದ ಅಲ್ಪ ಮಳೆಗೆ ಚರಂಡಿ ಹಾನಿಗೊಂಡಿದ್ದು, ಕಾಮಗಾರಿಯ ಗುಣಮಟ್ಟದ ಬಗ್ಗೆ ಗಂಭೀರ ಅನುಮಾನಗಳು ವ್ಯಕ್ತವಾಗಿವೆ. ಅರ್ಧಗಂಟೆ ಮಳೆಯಲ್ಲೇ ಚರಂಡಿ ಕಿತ್ತುಹೋಗಿರುವುದು ಕಳಪೆ ಕಾಮಗಾರಿಗೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
ಇತ್ತೀಚೆಗೆ ನಿರ್ಮಾಣಗೊಂಡಿದ್ದ ಈ ಚರಂಡಿ ಇಷ್ಟು ಬೇಗ ಹಾನಿಯಾಗಿರುವುದರಿಂದ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಅರ್ಧಗಂಟೆ ಮಳೆಯನ್ನೇ ಸಹಿಸಲಾರದ ಕಾಮಗಾರಿ ಮಾಡಿದರೆ ಜನರ ತೆರಿಗೆ ಹಣದ ಪರಿಸ್ಥಿತಿ ಏನು?” ಎಂದು ಪ್ರಶ್ನಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಕಾಮಗಾರಿಯ ಗುಣಮಟ್ಟ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಡ್ರಿಂಕ್ ಆ್ಯಂಡ್ ಡ್ರೈವ್ಗೆ ಕೋರ್ಟ್ ಕೊಟ್ಟ ಶಿಕ್ಷೆ ನೋಡಿ..!



















