ಬೆಂಗಳೂರು : ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಹುಬ್ಬೇರಿಸುವಂತ ಘಟನೆ ನಡೆದಿದ್ದು, ಸಾರ್ವಜನಕರ ಮೆಚ್ಚುಗೆಗೆ ಪಾತ್ರವಾಗಿದೆ. ನಿನ್ನೆ ತಡರಾತ್ರಿ ಮೆಟ್ರೋದಲ್ಲಿ ಜೀವಂತ ಅಂಗಾಂಗ ರವಾನೆ ಮಾಡಲಾಗಿದೆ.
ಎರಡನೇ ಬಾರಿ ನಮ್ಮ ಮೆಟ್ರೋದಲ್ಲಿ ಜೀವಂತ ಯಕೃತ್ ರವಾನೆ ಮಾಡಲಾಗಿದೆ. ಈ ಹಿಂದೆ ಆಗಸ್ಟ್ 1 ರಂದು ವೈಟ್ ಫೀಲ್ಡ್ನ ಮೆಟ್ರೋ ಸ್ಟೇಷನ್ ನಿಂದ ರವಾನೆ ಮಾಡಲಾಗಿತ್ತು. ಸ್ಪರ್ಶ ಆಸ್ಪತ್ರೆಯಿಂದ ಅಪೋಲೋ ಆಸ್ಪತ್ರೆಗೆ ರವಾನೆಯಾಗಿದೆ.
ಯಶವಂತಪುರ ಇಂಡಸ್ಟ್ರಿ ಮೆಟ್ರೋ ನಿಲ್ದಾಣದಿಂದ ಮಂತ್ರಿ ಸ್ಕ್ವೇರ್ ಸಂಪಿಗೆ ರಸ್ತೆ ಮೆಟ್ರೋ ನಿಲ್ದಾಣದ ಮೂಲಕ ಶೆಷಾದ್ರಿಪುರಂ ಬಳಿ ಇರುವ ಅಪೊಲೋ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಯಶವಂತಪುರದ ಸ್ಪರ್ಶ್ ಆಸ್ಪತ್ರೆಯಿಂದ ರಾತ್ರಿ 11 ಗಂಟೆಗೆ ಹೊರಟಿದ್ದ ಜೀವಂತ ಯಕೃತ್ ಕೇವಲ 20 ನಿಮಿಷಗಳಲ್ಲಿ 7 ನಿಲ್ದಾಣಗಳನ್ನು ದಾಟಿ ತಲುಪಿದೆ.



















