ಮಹಿಳೆಯೊಬ್ಬರು ಲಿವ್ ಇನ್ ನಲ್ಲಿದ್ದ ಸಂಗಾತಿಯನ್ನೇ ಕೊಲೆ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಸಹೋದರನ ಸಹಾಯದಿಂದ ಮಹಿಳೆ ಈ ಕೃತ್ಯ ಎಸಗಿದ್ದಾರೆ. ಈ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ತಲೆ ಮತ್ತು ಕುತ್ತಿಗೆಗೆ ಪ್ಯಾನ್‌ನಿಂದ ಹೊಡೆದು ಕೊಲೆ ಮಾಡಿದ್ದಾರೆಂದು ಪೊಲೀಸರು ಆರೋಪಿಸಿದ್ದು, ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಹಿಳೆ ತನ್ನ ಸಹೋದರನ ಸಹಾಯದಿಂದ ಟಿಕ್ರಿ ಗ್ರಾಮದಲ್ಲಿ ಕೊಲೆ ಮಾಡಿದ್ದಾಳೆ. ಗುರುಗ್ರಾಮದ ಅಶೋಕ್ ವಿಹಾರ್ ನಿವಾಸಿ ನೀತು ಅಲಿಯಾಸ್ ನಿಶಾ (34) ಮತ್ತು ವಿಕ್ಕಿ (28) ಕಳೆದ ಆರು ವರ್ಷಗಳಿಂದ ಸಂಬಂಧ ಹೊಂದಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ಮಹಿಳೆಗೆ ಮದುವೆಯಾಗಿದ್ದು, ಪತಿಯಿಂದ ದೂರವಿದ್ದರು. 15 ವರ್ಷದ ಮಗಳಿದ್ದಾಳೆ. ನ್ಯಾಯಾಲಯವು ನೀತುವನ್ನು ಒಂದು ದಿನದ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಮಹಿಳೆಯ ಸಹೋದರ ಪರಾರಿಯಾಗಿದ್ದು, ಪೊಲೀಸರು ಆತನಿಗಾಗಿ ಬಲೆ ಬೀಸಿದ್ದಾರೆ.