ಬೆಂಗಳೂರು : ರಾಜ್ಯದಲ್ಲಿ ಮದ್ಯ ಮಾರಾಟದಲ್ಲಿ ಭಾರೀ ಇಳಿಕೆ ಕಂಡುಬಂದಿದೆ. 2023-24ಕ್ಕೆ ಹೋಲಿಸಿದ್ರೆ ಈ ವರ್ಷ ಮದ್ಯ ಮಾರಾಟದಲ್ಲಿ ಭಾರೀ ಕುಸಿತ ಕಂಡಿದೆ. ಅಬಕಾರಿ ಶುಲ್ಕ ಹೆಚ್ಚಳದಿಂದ ರಾಜ್ಯದಲ್ಲಿ ಮದ್ಯ ಮಾರಾಟ ಕುಸಿತವಾಗಿದ್ದು, ಇದರಿಂದ ರಾಜ್ಯಕ್ಕೆ ಭಾರೀ ನಷ್ಟ ಉಂಟಾಗಿದ್ದಲ್ಲದೆ, ಮದ್ಯಪಾನ ಮಾಡುವವರ ಸಂಖ್ಯೆಯೂ ಕಡಿಮೆಯಾಗಿದೆ. ಬಿಯರ್ ಮಾರಾಟ ಕೂಡ ಪಾತಾಳಕ್ಕೆ ಕುಸಿದಿದೆ ಎಂದು ವರದಿಗಳು ತಿಳಿಸಿವೆ.
ಕರ್ನಾಟಕದಲ್ಲಿ ಅಬಕಾರಿ ಶುಲ್ಕದ ಹೆಚ್ಚಳ ನೀತಿ ರಾಜ್ಯದ ಮಧ್ಯ ಮಾರಾಟವನ್ನು ಗಣನೀಯವಾಗಿ ಕುಸಿತಕ್ಕೆ ಒಳಪಡಿಸಿದೆ. ರಾಜ್ಯದಲ್ಲಿ 2023ರ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ 352 ಲಕ್ಷ ಲೀಟರ್ ಮಧ್ಯ ಮಾರಾಟವಾಗಿದ್ದರೆ,2024ರಲ್ಲಿ ಇದು 345ಲಕ್ಷ ಲೀಟರ್‌ಗೆ ಸೀಮಿತವಾಗಿತ್ತು.ಪ್ರಸ್ತುತ 2025ರ ಅವಧಿಯಲ್ಲಿ ಇದು ಮತ್ತಷ್ಟು ಇಳಿಕೆಯಾಗಿ 342 ಲಕ್ಷ ಲೀಟರ್ ಮಾರಾಟವಾಗಿದೆ. ಇದರಿಂದ 2023ಗೆ ಹೋಲಿಸಿದರೆ 10 ಲಕ್ಷ ಲೀಟರ್‌ಗಿಂತ ಹೆಚ್ಚು ಕುಸಿತ ಕಂಡಿದ್ದು, ಶೇ.2.8ರಷ್ಟು ಮಾರಾಟದಲ್ಲಿ ಇಳಿಕೆಯಾಗಿದೆ. ಅಬಕಾರಿ ಇಲಾಖೆಯ ಪ್ರಕಾರ, ಈ ಕುಸಿತಕ್ಕೆ ಮುಖ್ಯ ಕಾರಣವೇ ಮಧ್ಯದ ಮೇಲಿನ ಶುಲ್ಕ ಹೆಚ್ಚಳ. ಈ ನೀತಿಯು ಗ್ರಾಹಕರ ಮೇಲೆ ಹೆಚ್ಚಿನ ತೆರಿಗೆ ಭಾರ ಹೇರಿದ್ದು, ಮಾರಾಟವನ್ನು ನೇರವಾಗಿ ಪ್ರಭಾವಿತಗೊಳಿಸಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇದಲ್ಲದೆ, ಬಿಯರ್ ಮಾರಾಟವು ಮತ್ತಷ್ಟು ಚಿಂತಾಜನಕ ಸ್ಥಿತಿಯಲ್ಲಿದೆ. ಕಳೆದ ವರ್ಷ ಏಪ್ರಿಲ್-ಸೆಪ್ಟೆಂಬರ್‌ನಲ್ಲಿ 242 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದ್ದರೆ, 2025ರಲ್ಲಿ ಇದು 195 ಲಕ್ಷ ಬಾಕ್ಸ್‌ಗೆ ಕುಸಿತಗೊಂಡಿದೆ. ಅಂದರೆ, 47 ಲಕ್ಷ ಬಾಕ್ಸ್‌ಗಳ ದೊಡ್ಡ ಇಳಿಕೆಯಾಗಿದ್ದು, ಶೇ.19ರಷ್ಟು ಕುಸಿತ ಕಂಡಿದೆ. ಪ್ರತಿ ತಿಂಗಳು ಬಿಯರ್ ಮಾರಾಟದಲ್ಲಿ ಇಳಿಕೆಯಾಗುತ್ತಿದ್ದು, ಇದು ರಾಜ್ಯದ ಅಬಕಾರಿ ವ್ಯವಹಾರಕ್ಕೆ ಗಂಭೀರ ಸವಾಲು ತಂದಿದೆ. ಗ್ರಾಹಕರು ಶುಲ್ಕ ಹೆಚ್ಚಳದಿಂದಾಗಿ ಬಿಯರ್ ಖರೀದಿ ಮಾಡಿದ್ದಾರೆ ಎಂದು ಉದ್ಯಮಿಗಳು ಹೇಳಿದ್ದಾರೆ. ಈ ತಿಂಗಳುಗಳಲ್ಲಿ ಮಾರಾಟದ ಕುಸಿತವು ರಾಜ್ಯದ ಬಾರ್, ಕ್ಲಬ್ ಮತ್ತು ರಿಸಾರ್ಟ್‌ಗಳ ವ್ಯವಹಾರವನ್ನು ಕಷ್ಟಕ್ಕೆದೂಡಿದ್ದು, ನೂರಾರು ಉದ್ಯೋಗಗಳು ಅಪಾಯಕ್ಕೆ ಎದುರಾಗಿವೆ.



















