ಬೆಂಗಳೂರು : 9 ತಿಂಗಳಿಂದ ಸಂಬಳ ನೀಡದ ಹಿನ್ನೆಲೆ GBA ಕಚೇರಿಗೆ ಲಿಂಕ್ ವರ್ಕರ್ಸ್ ಮುತ್ತಿಗೆ ಹಾಕಿದ್ದಾರೆ. ಕಸ ವಿಲೇವಾರಿ ಘಟಕ, ಕಾಂಪೋಸ್ಟ್ ಘಟಕ ಸೇರಿದಂತೆ ವಿವಿಧ ಕಡೆಗಳಲ್ಲಿ ಕೆಲಸ ಮಾಡುವ 200ಕ್ಕೂ ಅಧಿಕ ಕಾರ್ಯಕರ್ತೆಯರು ಕಾರ್ಪೋರೇಷನ್ ಸರ್ಕಲ್ ಬಳಿ ಇರುವ ಜಿಬಿಎ ಕೇಂದ್ರ ಕಚೇರಿ ಮುತ್ತಿಗೆ ಹಾಕಲಾಗಿದೆ.
ಜಿಬಿಎ ವ್ಯಾಪ್ತಿಯಲ್ಲಿ ತಿಂಗಳಿಗೆ 14 ಸಾವಿರ ಸಂಬಳ ಪಡೆದು 300ಕ್ಕೂ ಅಧಿಕ ಲಿಂಕ್ ವರ್ಕರ್ಸ್ ಕೆಲಸ ಮಾಡುತ್ತಿದ್ದಾರೆ. ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಳೆದ 9 ತಿಂಗಳಿಂದ ಸಂಬಳ ನೀಡದ ಹಿನ್ನೆಲೆ ಇಂದು ಕೆಲಸಕ್ಕೆ ಗೈರಾಗಿ ಜಿಬಿಎ ಕಚೇರಿಗೆ ಮುತ್ತಿಗೆ ಹಾಕಿ, ಸಂಬಳ ನೀಡದೆ ಇದ್ದರೆ ಜಿಬಿಎಯಲ್ಲೇ ವಾಸ ಮಾಡ್ತೀವಿ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ‘ಕೃಷ್ಣ-ರುಕ್ಕು’ ಬಿಗ್ ಟ್ವಿಸ್ಟ್..?



















