ಬೆಂಗಳೂರು: ಲಿಂಗಾಯತ ಧರ್ಮವನ್ನು ಅಲ್ಪಸಂಖ್ಯೆಯ ಧರ್ಮ ಎಂದು ಘೋಷಿಸಿಸಲು ನಾನು ಮನವಿ ಮಾಡುತ್ತೇನೆ ಎಂದು ನ್ಯಾ. ನಾಗಮೋಹನ್ ದಾಸ್ ಹೇಳಿದ್ದಾರೆ.
ಬಸವಣ್ಣ ಅವರಿಗೆ ಸಂಸ್ಕೃತಿ ನಾಯಕ ಎಂದು ಘೋಷಣೆ ಮಾಡಿ ಒಂದು ವರ್ಷವಾದ ಹಿನ್ನಲೆ, ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಾಕ್ರಮವನ್ನು ಉದ್ದೇಶಿಸಿ ಮಾತನಾಡಿದ ನ್ಯಾ. ನಾಗಮೋಹನ್ ದಾಸ್, ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮ ಎಂದು ಘೋಷಣೆ ಮಾಡಬೇಕು. ಅಲ್ಪಸಂಖ್ಯಾತರ ಸ್ಥಾನ ಮಾನ ಅವರಿಗೆ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಕಲ್ಯಾಣದತ್ತ ಅಭಿಯಾನದಲ್ಲಿ ನಾನು ಭಾಗವಹಿಸಲು ಅವಕಾಶ ಮಾಡಿಕೊಟ್ಟಿರುವ ಎಲ್ಲರಿಗೂ ವಂದಿಸುತ್ತೇನೆ. ಮಿತ್ರರ ಜೊತೆ ಹೋರಾಟಕ್ಕೆ ಕೈ ಜೋಡಿಸುವುದರೊಂದಿಗೆ ನಾವು ನಮ್ಮ ಶತ್ರುಗಳು ಯಾರು ಎಂದು ನೋಡಬೇಕು. ನಮಗೆ ಯಾರು ಒಳ್ಳೆಯದು ಬಯಸುತ್ತಾರೋ ಅವರು ನಮ್ಮ ಆಯ್ಕೆ ಆಗಬೇಕು. ಹಾಗೆಯೇ, ಬಸವಣ್ಣನವರನ್ನು ನಾವು ಅನುಸರಿಸಬೇಕೆಂದು ಎಂದು ಹೇಳಿದ್ದಾರೆ.