ಬೆಂಗಳೂರು: ಕಾಂಗ್ರೆಸ್ ಮುಖಂಡ ಹಾಗೂ ಸಚಿವ ಜಮೀರ್ ಅಹ್ಮದ್ ಆಪ್ತ ಅಲ್ತಾಫ್ ಗೆ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಲ್ತಾಫ್ ಗೆ ಜೀವ ಬೆದರಿಕೆ ಹಾಕಿದ್ದ ಚೆನ್ನೈ ಮೂಲದ ಓರ್ವ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದುಬೈನಿಂದ ಸಚಿವ ಜಮೀರ್ ಆಪ್ತ ಅಲ್ತಾಪ್ ಗೆ ಬೆದರಿಕೆ ಹಾಕಲಾಗಿತ್ತು ಎನ್ನಲಾಗಿದೆ. ಈ ಕುರಿತು ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ತಮಿಳುನಾಡಿನ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಈತನನ್ನು ಚೆನ್ನೈ ಮೂಲದ ಡೆವಿಡ್ ಎಂದು ಗುರುತಿಸಲಾಗಿದೆ.
ಅಲ್ತಾಫ್ ಪರಿಚಯಸ್ಥ ಅಜ್ಮತ್ ಉಲ್ಲಾ ಗೆ ಅನಾಮಿಕ ವ್ಯಕ್ತಿ ಕರೆ ಮಾಡಿದ್ದ. ಫೆ. 5ರಂದು ರಾತ್ರಿ ವೇಳೆ ಈ ಕರೆ ಬಂದಿತ್ತು. ನೀನು ಕೋರ್ಟ್ ನಲ್ಲಿ ಸಾಕ್ಷಿ ಹೇಳಬಾರದು ಎಂದು ಬೆದರಿಕೆ ಹಾಕಿದ್ದ ನ್ನಲಾಗಿದೆ. ನೀನು ಆರೆಸ್ಸೆಸ್ ಚಮಚಾಗಿರಿ ಮಾಡಿದರೆ, ಪಿಎಫ್ ಐ ನಿನ್ನ ಸುಮ್ಮನೆ ಬಿಡುವುದಿಲ್ಲ. ಈಗಾಗಲೇ ಹಲವು ಬಾರಿ ನೀನು ಬಚಾವ್ ಆಗಿದ್ದಿ. ಈ ಬಾರಿ ಬಚಾವ್ ಆಗಲು ಸಾಧ್ಯವಿಲ್ಲ ಎಂದು ಧಮ್ಕಿ ಹಾಕಿದ್ದ ಎನ್ನಲಾಗಿದೆ.
ಈ ರೀತಿ ಬೆದರಿಕೆ ಹಾಕಲು ದುಬೈ ಮೂಲದ ವ್ಯಕ್ತಿಗೆ ಡೆವಿಡ್ ಸಿಮಿ ಕೊಡಿಸಿದ್ದ ಎನ್ನಲಾಗಿದೆ. ಸದ್ಯ ಆರೋಪಿ ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



















