ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸಿಟಿ ರವಿ ಪ್ರಕರಣದ ಕುರಿತು ಸಿಎಂಗೆ ಪತ್ರ ಬರೆದಿದ್ದಾರೆ.
ಪತ್ರದ ಮೂಲಕ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಪ್ರಕರಣದ ಕುರಿತು ವರದಿ ಕೇಳಿದ್ದಾರೆ. ಬೆಳಗಾವಿ ಪರಿಷತ್ ನಲ್ಲಿ ನಡೆದ ಪ್ರಕರಣದ ಸಂಪೂರ್ಣ ವಿವರ ನೀಡಬೇಕೆಂದು ಕೇಳಿದ್ದಾರೆ.
ಈ ಹಿಂದೆ ರಾಜ್ಯಪಾಲರಿಗೆ ವಿಪ ಸದಸ್ಯ ಸಿ.ಟಿ. ರವಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ವರದಿ ಕೇಳಿದ್ದಾರೆ.