ಹಾಸನ : ಯಾವ ಕಾರಣಕ್ಕೆ ದೇವೇಗೌಡನನ್ನ ತೆಗೆದಿರಿ, ನಾನು ಪಿಎಂ ಆಗಬೇಕು ಎಂದು ಅರ್ಜಿ ಹಾಕಿದ್ದೇನಾ ಚರ್ಚೆ ಆಗಲಿ ಎಂದು ಮಾಜಿ ಪ್ರಧಾನಿ ದೇವೆಗೌಡ ಸವಾಲು ಹಾಕಿದ್ದಾರೆ.
ಹಾಸನದಲ್ಲಿ ವರದಿಗಾರರೊಂದಿಗೆ ದೇವೆಗೌಡ ಮಾತನಾಡಿ ಬಿಹಾರದಲ್ಲಿ ಕೂಡ ಗ್ಯಾರಂಟಿ ಅಂದರು ಅವರಿಗೆ ಸಿಕ್ಕಿದ್ದು ಆರು ಸೀಟ್. ಇವರ ಹೊಡೆತ ತಡೆದುಕೊಂಡು ಇನ್ನೂ ಬದುಕಿದ್ದೇವೆ. ಜನತೆಯ ಆಶೀರ್ವಾದ ದಿಂದ ಬದುಕಿದ್ದೇವೆ. ಎಂದು ಕಾಂಗ್ರೆಸ್‌ಗೆ ಒಂದೇ ಸಿದ್ದಾಂತ ಅದು ಎಂದಿಗೂ ಶಾಶ್ವತ ಎಂಬ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ.
ಇಂದು ನಮ್ಮ ಕುಲದೇ ವರಿಗೆ ಪೂಜೆ ಮಾಡಿದ್ದೇವೆ. ನಾವು ವಂಶಪಾರಂಪರ್ಯವಾಗಿ ಈಶ್ವರನ ಆರಾದಕರು. 93 ವಯಸ್ಸು ಆದರು ಹೋರಾಟದ ಕೆಚ್ಚೆದೆ ಜನತೆ ಕೊಟ್ಟಿದ್ದು, ನಾನು ಅಧಿಕಾರಕ್ಕೆ ಅಂಟಿ ಕೂತ ವ್ಯಕ್ತಿ ಅಲ್ಲ. ನನ್ನ ಜೀವನದಲ್ಲಿ ನಾನು ಬೆಳೆದು ಬಂದ ದಾರಿ ಅದು. ಮಹಾರಾಷ್ಟ್ರದಲ್ಲಿ ನಮ್ಮ ಪಕ್ಷದ ಐದು ಜನರು ಗೆದ್ದಿದ್ದಾರೆ ಎಂದಿದ್ದಾರೆ.
ಬಿಜೆಪಿ ಸಿಎಂ ಹಾಗು ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಾವು ಎನ್‌ಡಿಎನಲ್ಲಿ ಇದ್ದೇವೆ ಪಾರ್ಲಿಮೆಂಟ್ ಹಾಗು ಎಲ್ಲಾದರಲ್ಲೂ ಒಟ್ಟಿಗೆ ಇರ್ತೇವೆ. ನೀವು ನಮ್ಮನ್ನ ಮುಗಿಸಿದ್ರಿ ನಮಗೆ ಶಕ್ತಿ ಇಲ್ಲ ನಾವು ಎನ್ ಡಿ ಎ ಜೊತೆ ಹೋಗಿದ್ದಿವಿ, ನೀವು ಯಾಕೆ ಸ್ಟಾಲಿನ್ ಮನೆ ಬಾಗಿಲಿಗೆ ಹೋಗ್ತಿರಾ ಎಂದು ಲೇವಡಿ ಮಾಡಿದ್ದಾರೆ.
ಇದನ್ನೂ ಓದಿ : ಪಿಂಪ್ರಿ-ಚಿಂಚ್‌ವಡ್ ಪಾಲಿಕೆ ಸಮರ | ಒಂದಾದ ಪವಾರ್ ಕುಟುಂಬ ; ಚಿಕ್ಕಪ್ಪ ಶರದ್ ಪವಾರ್ ಜತೆ ಕೈಜೋಡಿಸಿದ ಅಜಿತ್ ಪವಾರ್



















