ರಾಯಚೂರು: ಮುಜರಾಯಿ ಇಲಾಖೆಯಿಂದ ದೇಗುಲ, ಮಠಗಳನ್ನು ಮುಕ್ತ ಮಾಡಬೇಕು ಎಂದು ಮಂತ್ರಾಲಯ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀ ಅಭಿಪ್ರಾಯ ಪಟ್ಟಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಿರುಪತಿ ತಿಮ್ಮಪ್ಪನ ಪ್ರಸಾದ ತಯಾರಿಕೆಯಲ್ಲಿ ಲಡ್ಡುಗೆ (Tirupati Laddu) ದನದ ಕೊಬ್ಬು, ಹಂದಿ ಕೊಬ್ಬು ಬಳಸಿರುವ ವಿಚಾರಕ್ಕೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರವೇ ದೇವಸ್ಥಾನ, ಮಠಗಳ ಜವಾಬ್ದಾರಿ ತೆಗೆದುಕೊಲ್ಳಬೇಕು. ಇವುಗಳಿಗಾಗಿ ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
ಇವುಗಳ ನಿರ್ವಹಣೆ ರಾಜ್ಯ ರಾಜಧಾನಿಯಲ್ಲಿ ಕುಳಿತು ನಡೆಸಲು ಆಗುವುದಿಲ್ಲ. ದೇಗುಲದಲ್ಲಿ ಸಮಸ್ಯೆ, ದೋಷ ಆದಾಗ ಸರ್ಕಾರ ಪರಿಶೀಲಿಸಬೇಕು. ಸುಮೋಟೋ ಹಾಕಿ ಅದನ್ನು ಸರಿಪಡಿಸುವ ಕೆಲಸವಷ್ಟೇ ಮಾಡಬೇಕು. ದೇಗುಲದ ವಿಚಾರದಲ್ಲಿ ಸರ್ಕಾರ ತಲೆಹಾಕವುದು, ಪಾವಿತ್ರ್ಯತೆ, ಸಂಪ್ರದಾಯಗಳನ್ನು ಬದಲಾಯಿಸುವ ಅಧಿಕಾರ ಸರ್ಕಾರಕ್ಕೆ ಇಲ್ಲ. ಅಂಬೇಡ್ಕರ್ ಅವರು ನಮಗೆ ಸಂವಿಧಾನವನ್ನು ನೀಡಿದ್ದಾರೆ. ಆ ಪವಿತ್ರ ಗ್ರಂಥದಲ್ಲಿ ಇಂತಹುದಕ್ಕೆ ಅವಕಾಶ ಇಲ್ಲ ಎಂದು ಹೇಳಿದ್ದಾರೆ.
ಇನ್ನು ತಿರುಪತಿ ದೇವಸ್ಥಾನವನ್ನ ಶುದ್ಧೀಕರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಿಜವಾಗಿಯೂ ಕಲಬೆರಕೆ ಆಗಿದ್ದರೆ, ಪಶು ಕೊಬ್ಬು ಬೆರಿಕೆ ಆಗಿದ್ದರೆ, ಆ ಬಗ್ಗೆ ಸಂರಕ್ಷಣೆ ಆಗಬೇಕು. ನಾವೂ ಶುದ್ಧೀಕರಣದಲ್ಲಿ ಭಾಗಿಯಾಗುತ್ತೇವೆ ಎಂದು ಹೇಳಿದ್ದಾರೆ.