ಚಿಕ್ಕೋಡಿ: ದಿ. ದೇವರಾಜು ಅರಸು ಅವರ ದಾಖಲೆ ಮುರಿದು ಇನ್ನೂ ಹೆಚ್ಚಿನ ವರ್ಷಗಳ ಕಾಲ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯಲಿ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕು ಆಸ್ಪತ್ರೆ ಆವರಣದಲ್ಲಿ ನಿರ್ಮಿಸಿರುವ ವಸತಿ ಗೃಹಗಳ ಕಟ್ಟಡಗಳ ಉದ್ಘಾಟನೆ ಮಾಡಿದ ಬಳಿಕ ಮಾಧ್ಯಮಗಳಿಗೆ ಸ್ಪಂದಿಸಿದ ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಏಳು ವರ್ಷ ಆಗಿದೆ. ಇನ್ನಷ್ಟು ವರ್ಷಗಳ ಕಾಲ ಸಿಎಂ ಆಗಿ ಮುಂದುವರಿಯಲಿ. ಅರಸು ಅವರ ದಾಖಲೆ ಅಷ್ಟೇ ಅಲ್ಲದೆ, ಇನ್ನುಳಿದ ದಾಖಲೆಗಳನ್ನು ಮುರಿಯುವಂತಾಗಲಿ ಎಂದಿದ್ದಾರೆ.
ರಾಹುಲ್ ಗಾಂಧಿ ಅವರು ಲೋಕಸಭಾ ಚುನಾವಣೆಯಲ್ಲಿ ಮತ ಕಳ್ಳತನವಾಗಿದೆ ಎಂದು ಆರೋಪ ಮಾಡಿರುವುದು ಸತ್ಯಕ್ಕೆ ದೂರವಾದದ್ದು ಎಂದು ಬಿಜೆಪಿಗರ ಹೇಳಿಕೆ ಕುರಿತು ಮಾತನಾಡಿ, ಬಿಜೆಪಿ ಅವರು ಮತ ಕಳ್ಳತನದ ಬಗ್ಗೆ ಯಾಕೆ ಪ್ಯಾಕ್ಟ್ ಚೆಕ್ ಮಾಡಬೇಕು. ಎಲೆಕ್ಷನ್ ಕಮೀಷನ್‌ಗೆ ಈಗಾಗಲೇ ಸ್ಪಷ್ಟ ಮಾಹಿತಿ ನೀಡಿದ್ದೇವೆ. ನಾವೆಲ್ಲ ಪ್ಯಾಕ್ಟ್ ಚೆಕ್ ಮಾಡಿಯೇ ಎಲ್ಲ ಮಾಹಿತಿ ಒದಗಿಸಿದ್ದೇವೆ. ಬಿಜೆಪಿಯವರು ಏನು ಪ್ಯಾಕ್ಟ್ ಚೆಕ್ ಮಾಡುತ್ತಿದ್ದಾರೆ ಅದರ ಬಗ್ಗೆ ನನಗೆ ಗೊತ್ತಿಲ್ಲ. ಅದರ ಬಗ್ಗೆ ಮಾಹಿತಿ ಇಲ್ಲ. ಇದರಲ್ಲಿ ಚುನಾವಣಾ ಆಯೋಗದ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಹೇಳಿದ್ದಾರೆ.



















