ಮಂಡ್ಯ : ಅಭಿಮಾನಿಗಳಿಗೆ ಕಾಮೆಂಟ್ ಮಾಡದಂತೆ ದರ್ಶನ್ ಸೂಚನೆ ನೀಡುವುದು ಒಳ್ಳೆಯದು ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕಿವಿಮಾತು ಹೇಳಿದ್ದಾರೆ
ಮಂಡ್ಯದ ದುದ್ದ ಗ್ರಾಮದಲ್ಲಿ ಮಾತನಾಡಿದ ದರ್ಶನ್ ಪುಟ್ಟಣ್ಣಯ್ಯ, ತಪ್ಪು ಮಾಡಿದರೆ ದರ್ಶನ್ ಗೆ ಶಿಕ್ಷೆ ಆಗುತ್ತದೆ. ಕಾನೂನಿಗಿಂತ ಯಾರು ದೊಡ್ಡವರಲ್ಲ. ಸುಮ್ಮನೆ ಅದೆ ವಿಚಾರವಾಗಿ ಮಾತನಾಡುವುದು ವ್ಯರ್ಥ. ತೀರ್ಪು ಹೇಗೆ ಬರುತ್ತದೋ ಅದಕ್ಕೆ ಮನ್ನಣೆ ನೀಡಬೇಕಿದೆ ಎಂದಿದ್ದಾರೆ.
ಫ್ಯಾನ್ಸ್‌ಗೆ ಈ ರೀತಿ ಕಾಮೆಂಟ್ ಮಾಡಬಾರದು ಅಂತ ದರ್ಶನ್ ಹೇಳಬೇಕು. ಸರ್ಕಾರ ಸಾಮಾಜಿಕ ಜಾಲತಾಣ ಕಾಮೆಂಟ್ ಗಳಿಗೆ ಕಡಿವಾಣ ಅಥವಾ ಎಜುಕೆಟ್ ಮಾಡಬೇಕು. ಅಭಿಮಾನಿಗಳಿಗೆ ಕಾಮೆಂಟ್ ಮಾಡದಂತೆ ದರ್ಶನ್ ಹೇಳಿಕೆ ನೀಡುವುದು ಒಳ್ಳೆಯದು ಇಲ್ಲವೆಂದರೆ ಈ ಕಾಮೆಂಟ್ ಜಿದ್ದಾ ಜಿದ್ದಿ ನಡೆಯುತ್ತಲೇ ಇರತ್ತದೆ ಎಂದಿದ್ದಾರೆ.