ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣ ಹೊರವಲಯದ ಮನಗಳ್ಳಿ ಪ್ರದೇಶದಲ್ಲಿ ಹಸುಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಸೆರೆಹಿಡಿದಿದ್ದಾರೆ.
ಸುಮಾರು ಎರಡು ವರ್ಷದ ಹೆಣ್ಣು ಚಿರತೆ, ಸಾಕುನಾಯಿ, ಹಸುಗಳ ಮೇಲೆ ದಾಳಿ ಮಾಡುತ್ತಿದ್ದು, ಸದ್ಯ ಸೆರೆ ಹಿಡಿದ ಕಾರಣ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.
ಅರಣ್ಯಾಧಿಕಾರಿಗಳು ಚಿರತೆಯನ್ನು ಸೆರೆ ಹಿಡಿಯಲು ಬೋನನ್ನುಅಳವಡಿಸಿದ್ದರು. ಇದೀಗ ಚಿರತೆ ಸೆರೆಗೆ ಬಿದ್ದ ಹಿನ್ನಲೆ, ಗ್ರಾಮಸ್ಥರಲ್ಲಿ ಭಯ ದೂರವಾಗಿದೆ. ಹೆಚ್ಚಿನ ಸುರಕ್ಷತೆಗಾಗಿ ಸ್ಥಳದಲ್ಲಿ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ದೇವರ ಹುಂಡಿಯಲ್ಲಿ ಪತ್ತೆಯಾದ ವಿಚಿತ್ರ ಹರಕೆ ಚೀಟಿ | ಅತ್ತೆಯ ಸಾವಿಗೆ ಪ್ರಾರ್ಥನೆ



















