ಹಾವೇರಿ: ಜನವಸತಿ ಪ್ರದೇಶದ ಮನೆಯೊಂದರಲ್ಲಿ ಭಯಾನಕ ಚಿರತೆ ಪ್ರತ್ಯಕ್ಷವಾದ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಗರದ ನಾಡಿಗೇರಿ ಓಣೆಯಲ್ಲಿ ನಡೆದಿದೆ.
ನಾಗರಾಜ್ ಕಾಕಿ ಎಂಬುವವರ ಮನೆಯೊಳಗೆ ಚಿರತೆ ಕಂಡು ಬಂದಿದ್ದು, ಹಳೆ ಮನೆಯ ಹಿಂಬದಿಯ ಬಾಗಿಲಿನ ಮೂಲಕ ಒಳಗೆ ನುಗ್ಗಿರುವ ಶಂಕೆ ವ್ಯಕ್ತವಾಗಿದೆ.
ಬೆಳಗ್ಗೆ ಎದ್ದು ಹಳೆಯ ಮನೆಯತ್ತ ಬಂದು ನೋಡಿದಾಗ ಚಿರತೆ ಪತ್ತೆಯಾಗಿದ್ದು, ಕೂಡಲೇ ಆ ಮನೆಯ ಬಾಗಿಲು ಹಾಕಿ ಚಿರತೆಯನ್ನು ಲಾಕ್ ಮಾಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಗರದ ಜನವಸತಿ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷದಿಂದ ಜನರಲ್ಲಿ ಆತಂಕ ಮನೆ ಮಾಡಿದ್ದು, ರಾಣೆಬೆನ್ನೂರು ಶಹರಾ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.