ಚಾಮರಾಜನಗರ ಜಿಲ್ಲೆಯ ಕೊತ್ತಲವಾಡಿ ಸಮೀಪ ಚಿರತೆಯ ಶವ ಪತ್ತೆಯಾಗಿರುವ ಘಟನೆ ನಡೆದಿದೆ.
ಗಣಿ ತ್ಯಾಜ್ಯದ ಕಲ್ಲು ಸಂಗ್ರಹಿಸಿರುವ ಜಮೀನಿನನಲ್ಲಿ ಚಿರತೆ ಸತ್ತು ಬಿದ್ದಿದೆ. ಈ ಚಿರತೆಯು ಸುಮಾರು 5 ವರ್ಷದ ಗಂಡು ಚಿರತೆ ಇರಬಹುದು ಎಂದು ಶಂಕಿಸಲಾಗಿದೆ. ಚಿರತೆಗೆ ವಿಷ ಪ್ರಾಶನ ಮಾಡಿರಬಹುದು ಎಂದು ತಿಳಿದು ಬಂದಿದೆ. ಅಲ್ಲದೇ, ಚಿರತೆ ಶವದ ಸನಿಹದಲ್ಲೇ ಕರುವಿನ ಶವವೂ ಸಹ ಪತ್ತೆಯಾಗಿದೆ. ಸ್ಥಳಕ್ಕೆ ಬಿ.ಆರ್.ಟಿ ಅರಣ್ಯಾಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


















