ಚಾಮರಾಜನಗರ : ಗಡಿ ಜಿಲ್ಲೆಯಲ್ಲಿ ವನ್ಯ ಜೀವಿಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇತ್ತೀಚೆಗೆ ಜಿಲ್ಲೆಯ ಪಾಲಾರ್ ಚೆಕ್ ಪೋಸ್ಟ್ ಬಳಿ ರಾತ್ರಿ ವೇಳೆ ಕಾಡಾನೆ ಓಡಾಟ ಕಂಡುಬಂದಿತ್ತು. ಅದರ ಬೆನ್ನಲ್ಲೇ ಈಗ ಗುಂಡ್ಲುಪೇಟೆ ತಾಲೂಕಿನ ಶಿವಪುರದಲ್ಲಿ ಚಿರತೆ ಉಪಟಳ ಮುಂದುವರಿದಿದೆ.
ನಾಯಿ ಮೇಲೆ ದಾಳಿ ನಡೆಸಿದ ಚಿರತೆ, ಜನರು ಬರುತ್ತಿದ್ದಂತೆ ಕಾಡಿಗೆ ಓಡಿದೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಚಿರತೆ ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಸಫಾರಿಗರಿಗೆ ಸೂಪರ್ ಮಾರ್ನಿಂಗ್.. ಬಂಡೀಪುರದಲ್ಲಿ ಮರಿಗಳೊಟ್ಟಿಗೆ ದರ್ಶನ ನೀಡಿದ ಹುಲಿ



















