ಮುಂಬೈ :ಭಾರತೀಯ ಚಿತ್ರರಂಗಕ್ಕೆ ತಮ್ಮದೇ ಕೊಡುಗೆ ನೀಡಿದ ಶ್ರೇಷ್ಠ ಹಾಸ್ಯ ಕಲಾವಿದ, ನಟ ಗೋವರ್ಧನ್ ಅಸ್ರಾನಿ(84) ವಿಧಿವಶರಾಗಿದ್ದಾರೆ.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮುಂಬೈನ ಆಸ್ಪತ್ರೆಯಲ್ಲಿ ತಡರಾತ್ರಿ ಕೊನೆಯುಸಿರೆಳಿದ್ದಿದ್ದಾರೆ. ಸಾಂತಾಕ್ರೂಜ್ ರುಧ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಭಾರತದ ಪ್ರಸಿದ್ದ ಚಿತ್ರಗಳಲ್ಲೊಂದಾದ ʻಶೋಲೆʼ ಸಿನಿಮಾದ ಜೈಲರ್ ಪಾತ್ರದ ಮೂಲಕ ಜಗದ್ವಿಖ್ಯಾತಿಗಳಿಸಿದ್ದ ಗೋವರ್ಧನ್ ಅಸ್ರಾನಿ ಮೂಲತಃ ರಾಜಸ್ಥಾನದ ಜೈಪುರದ ನಿವಾಸಿ. ಇನ್ನೂ ಇಳಿ ವಯಸ್ಸಿನಲ್ಲಿ ಕೂಡ ಅದೇ ಉತ್ಸಾಹ ಮತ್ತು ಹುಮ್ಮಸ್ಸಿನಲ್ಲಿ ಚಿತ್ರಗಳ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದ ಅಸ್ರಾನಿ ದೀಪಾವಳಿ ಹಬ್ಬದ ಪ್ರಯುಕ್ತ ತಮ್ಮ ಸೋಶಿಯಲ್ ಮೀಡಿಯಾ ಅಭಿಮಾನಿಗಳಿಗೆ ಶುಭಾಶಯ ಕೋರಿದ್ದರು.
ನಿನ್ನೆ ಸಂಜೆ 4 ಗಂಟೆಯ ವರೆಗೆ ಆರೋಗ್ಯವಾಗಿಯೇ ಇದ್ದರು. ಬಳಿಕ ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಸ್ರಾನಿ ಕೊನೆಯುಸಿರೆಳೆದರು.