ಚನ್ನೈ: ನಟ ವಿನೋದ್ ರಾಜ್ ಅಮ್ಮನ ಕನಸಿಗೆ ಇಂದು ಜೀವ ಕೊಟ್ಟಿದ್ದಾರೆ. ಚೆನ್ನೈನ ಪುದುಪಾಕಂನಲ್ಲಿ ಡಾ.ಲೀಲಾವತಿ ಮೆಮೊರಿಯಲ್ ಹೆಲ್ತ್ ಕೇರ್ ಎಂಬ ಆಸ್ಪತ್ರೆಯನನ್ನು ನಿರ್ಮಾಣ ಮಾಡುವ ಮೂಲಕ ಲೀಲಾವತಿ ಅವರ ಕನಸನ್ನು ಸಾಕಾರಗೊಳಿಸಿದ್ದಾರೆ.
ವಿನೋದ್ ರಾಜ್ ಹಾಗೂ ಕಲೈಮೋಹನ್ ನೇತೃತ್ವದಲ್ಲಿ ಇಂದು ಆಸ್ಪತ್ರೆಯ ಉದ್ಘಾಟನೆ ನೆರೆವೇರಿಸಲಾಗಿದೆ. ಹಿರಿಯ ನಟಿ ಲೀಲಾವತಿ ಅವರು 2023ರ ಡಿಸೆಂಬರ್ 8ರಂದು ನಿಧನರಾಗಿದ್ದರು. ಆಸ್ಪತ್ರೆ ಕಟ್ಟಿಸಬೇಕು ಎಂಬುದು ಅವರ ಬಹಳ ವರ್ಷಗಳ ಕನಸಾಗಿತ್ತು.ಇಂದು ಲೀಲಾವತಿ ಹೆಸರಿನಲ್ಲಿ ಆಸ್ಪತ್ರಗೆ ಚಾಲನೆ ನೀಡಲಾಗಿದೆ.