ಮಂಡ್ಯ : ತೋಪಿನ ತಿಮ್ಮಪ್ಪನ ಸನ್ನಿಧಿಯಲ್ಲಿ ಇಂದು ಭಕ್ತರಿಗಾಗಿ ಭಕ್ತರಿಂದ ಹರಿಸೇವೆ ನಡೆಯುತ್ತಿದೆ.
ಮಂಡ್ಯ ಜಿಲ್ಲೆಯ ಮದ್ದೂರಿನ ಆಬಲವಾಡಿಯಲ್ಲಿರುವ ತೋಪಿನ ತಿಮ್ಮಪ್ಪನ ದೇಗುಲದಲ್ಲಿ ಭಕ್ತರಿಂದ ಪ್ರತಿ ವರ್ಷವೂ ಹರಿಸೇವೆ ನಡೆಯುತ್ತದೆ. ಪ್ರತಿ ವರ್ಷ ಆಷಾಢ ಮಾಸದಲ್ಲಿ ತೋಪಿನ ತಮ್ಮಪ್ಪನಿಗೆ ಹರಿಸೇವೆ ನಡೆಯುತ್ತದೆ.
ಈ ವೇಳೆ ಭಕ್ತರಿಗೆ ತಾವರೆ ಎಲೆಗಳಿಂದ ಅನ್ನ ಸಂತರ್ಪಣೆ ನಡೆಯುತ್ತದೆ. ದೇಗುಲದ ಮುಂಭಾಗ ತಾವರೆ ಎಲೆಯಲ್ಲಿ ಊಟ ಮಾಡಿದರೆ ಪುಣ್ಯಪ್ರಾಪ್ತಿಯಾಗುತ್ತದೆ ಎಂಬುವುದು ಜನರ ನಂಬಿಕೆಯಾಗಿದೆ. ಹರಿಸೇವೆಗಾಗಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುತ್ತಾರೆ.