ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿದ್ದ ಸಚಿವರ ಮುಂದೆಯೇ ದಲಿತ ನಾಯಕರು ತಹಸೀಲ್ದಾರ್ ರನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.
ವೇದಿಕೆಯಲ್ಲಿದ್ದ ಸಚಿವರ ಮುಂದೆಯೇ ದಲಿತ ನಾಯಕರು ತರಾಟೆಗೆ ತೆಗೆದುಕೊಂಡಿದ್ದಾರೆ. ದೇವನಹಳ್ಳಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆಯುತ್ತಿದ್ದ ಜಯಂತಿಯಂದು ತಾಲ್ಲೂಕು ಆಡಳಿತ ವ್ಯಾಪ್ತಿಯಲ್ಲಿ ಸಾಧನೆ ಮಾಡಿದ ದಲಿತ ಮುಖಂಡರಿಗೆ ಸನ್ಮಾನ ಮಾಡುವ ವಿಚಾರದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಸನ್ಮಾನದಲ್ಲಿ ಸಾಧಕರಿಗೆ ಅಪಮಾನ ಮಾಡಿರುವುದಾಗಿ ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೇದಿಕೆಯಲ್ಲಿ ಶಾಲು, ಹಾರ, ಹಾಕಿ ಪ್ರಶಸ್ತಿ ಪತ್ರ ನೀಡುವುದನ್ನು ತಾಲೂಕು ಆಡಳಿತ ಮರೆತಿದೆ ಎಂದು ಸಚಿವ ಕೆ ಹೆಚ್ ಮುನಿಯಪ್ಪ ಮುಂದೆಯೇ ತಹಶೀಲ್ದಾರ್ ಬಾಲಕೃಷ್ಣ ಮೇಲೆ ದಲಿತ ಮುಖಂಡರು ರೊಚ್ಚಿಗೆದ್ದಿದ್ದಾರೆ. ಬೇಕಂತಲೇ ದಲಿತರಿಗೆ ಸನ್ಮಾನ ವಿಚಾರದಲ್ಲಿ ತಹಶೀಲ್ದಾರ್ ಅಪಮಾನ ಮಾಡಿದ್ದಾರೆಂದು ಆರೋಪಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.



















