ಬೆಂಗಳೂರು: ನೈಸ್ ರಸ್ತೆಯಲ್ಲಿ ವಕೀಲರೊಬ್ಬರ ಮೃತದೇಹ ಪತ್ತೆಯಾಗಿದೆ.
ಜಗದೀಶ್ ಎಂಬ ವಕೀಲ ಶವ ಬನ್ನೇರುಘಟ್ಟ-ಕನಕಪುರ ನೈಸ್ ರಸ್ತೆಯಲ್ಲಿ ಪತ್ತೆಯಾಗಿದೆ. ತನ್ನ ಕಿಯಾ ಸೆಲ್ಟಾಸ್ ಕಾರು ನಿಲ್ಲಿಸಿದ್ದ 200 ಮೀಟರ್ ದೂರದಲ್ಲಿ ಮೃತದೇಹ ಪತ್ತೆಯಾಗಿದೆ.
ಕಾರಿನ ಹಲವೆಡೆ ಅಪಘಾತವಾದ ಗುರುತುಗಳಿವೆ. ಮೇ.2 ರಂದು ಸಂಜೆ 7.30 ರಿಂದ 8 ಗಂಟೆ ವೇಳೆಗೆ ಈ ಮೃತದೇಹ ಪತ್ತೆಯಾಗಿದೆ. ಅಥವಾ ಕಾರು ಟಚ್ ಆದ ವಿಚಾರಕ್ಕೆ ಗಲಾಟೆಯಾಗಿ ಕೊಲೆ ನಡೆದಿದೆಯಾ? ಅಥವಾ ಉದ್ಧೇಶ ಪೂರ್ವಕವಾಗಿ ಕೊಲೆ ಮಾಡಲಾಗಿದೆಯಾ?
ಇಲ್ಲವೇ ಅಪಘಾತ ಸಂಭವಿಸಿದೆಯಾ? ಎಂಬ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಕುರಿತು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.



















