ಬೆಂಗಳೂರು: ಇತ್ತೀಚೆಗಷ್ಟೇ ವಕೀಲ ಜಗದೀಶ್ ಮೇಲೆ ಕೆಲವರು ಹಲ್ಲೆ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈಗ ಅದರ ಬೆನ್ನಲ್ಲೇ ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿ ಜಗದೀಶ್ ಗನ್ ಮ್ಯಾನ್ ಏರ್ ಫೈರಿಂಗ್ ಮಾಡಿರುವ ಘಟನೆ ವರದಿಯಾಗಿದೆ.
ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಕೊಡಿಗೆಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಕೊಡಿಗೇಹಳ್ಳಿ ಮೋರ್ ಜಂಕ್ಷನ್ ಹತ್ತಿರ ಸ್ಥಳೀಯ ನಿವಾಸಿಗಳು ಅಣ್ಣಮ್ಮ ದೇವಿ ಕೂರಿಸುತ್ತಿದ್ದರು. ಈ ವೇಳೆ ಅಲ್ಲಿನ ಜನ ರಸ್ತೆ ಬ್ಲಾಕ್ ಮಾಡಿ ದೇವರನ್ನು ಕೂರಿಸುತ್ತಿದ್ದರು. ಈ ವಿಚಾರವಾಗಿಯೇ ವಕೀಲ ಜಗದೀಶ್ ಹಾಗೂ ಸ್ಥಳೀಯರ ಮಧ್ಯೆ ಗಲಾಟೆ ನಡೆದಿತ್ತು. ಇದೇ ವಿಡಿಯೋ ವೈರಲ್ ಆಗಿತ್ತು.
ನಂತರ ಕೊಡಿಗೇಹಳ್ಳಿ ಠಾಣೆಯಲ್ಲಿ ಈ ಬಗ್ಗೆ ದೂರು ಪ್ರತಿ ದೂರು ದಾಖಲಾಗಿತ್ತು. ಅಲ್ಲದೇ, ಶುಕ್ರವಾರ ಮತ್ತೆ ಅಣ್ಣಮ್ಮದೇವಿ ಕೂರಿಸಿದ್ದ ರಸ್ತೆ ಬಳಿ ವಕೀಲ ಜಗದೀಶ್ ಹೋಗಿದ್ದಾರೆ. ಆಗ ಸ್ಥಳೀಯರು ಮತ್ತು ಜಗದೀಶ್ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಗಲಾಟೆ ವೇಳೆ ಸ್ಥಳೀಯರು ವಕೀಲ ಜಗದೀಶ್ ಕಾರನ್ನು ಧ್ವಂಸಗೊಳಿಸಿದ್ದಾರೆ. ಈ ವೇಳೆ ಜಗದೀಶ್ ಗನ್ ಮ್ಯಾನ್ ಫೈರ್ ನಡೆಸಿದ್ದಾರೆ ಎನ್ನಲಾಗಿದೆ.