ಬೆಂಗಳೂರು: ನಟ ದರ್ಶನ್ ಬೆಂಬಲಿಗರಿಂದ ಲಾಯರ್ ಜಗದೀಶ್ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಆದರೆ, ಹಲ್ಲೆ ನಡೆಸಿದುವರ ನಟ ದರ್ಶನ್ ಬೆಂಬಲಿಗರಾ? ಎಂಬುವುದು ಮಾತ್ರ ಬಹಿರಂಗವಾಗಿಲ್ಲ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ವಿಡಿಯೋ ವೈರಲ್ ಆಗುತ್ತಿದೆ. ಲಾಯರ್ ಜಗದೀಶ್ ಜೊತೆ ನಾಲ್ಕೈದು ಜನ ವಾಗ್ವಾದ ನಡೆಸಿ ಜಗದೀಶ್ ಟೀ-ಶರ್ಟ್ ಹಿಡಿದು ನೂಕಾಟ ತಳ್ಳಾಟ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಲಾಯರ್ ಜಗದೀಶ್ ಗೆ ಥಳಿಸಿದ್ದಾರೆ.
ಲಾಯರ್ ಜಗದೀಶ್ ಕೂಡ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅಲ್ಲಿದ್ದವರ ಮೇಲೆ ಹಲ್ಲೆ ಮಾಡಿರುವುದು ಕೂಡ ವಿಡಿಯೋದಲ್ಲಿದೆ. ಈ ಜಗಳ ಯಾವ ಕಾರಣಕ್ಕೆ ನಡೆದಿದೆ? ಯಾರು ಹಲ್ಲೆ ಮಾಡಿದ್ದಾರೆ ಎಂಬುವುದು ಮಾತ್ರ ಬಹಿರಂಗವಾಗಿಲ್ಲ. ಆದರೆ, ಪರಸ್ಪರ ಕಿತ್ತಾಡಿಕೊಂಡಿರುವುದನ್ನು ಅದರಲ್ಲಿ ನೋಡಬಹುದು
ನಟ ದರ್ಶನ್ ಹಾಗೂ ಅವರ ಅಭಿಮಾನಿಗಳ ವಿರುದ್ಧ ಲಾಯರ್ ಜಗದೀಶ್ ಮಾತನಾಡುತ್ತಿದ್ದರು. ಹಾಗಾಗಿ ದರ್ಶನ್ ಅಭಿಮಾನಿಗಳೇ ಹಲ್ಲೆ ನಡೆಸಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಅದೇ ರೀತಿ ವೀಡಿಯೋ ವೈರಲ್ ಆಗುತ್ತಿದೆ. ಆದರೆ ಈ ಕುರಿತು ಯಾವುದೇ ನಿಖರ ಮಾಹಿತಿ ಲಭ್ಯವಾಗಿಲ್ಲ.


















