ಇಟಾನಗರ: ಭಾರೀ ಮಳೆ (Rain)ಯಿಂದಾಗಿ ಭೂ ಕುಸಿತ(Landslide) ಉಂಟಾದ ಪರಿಣಾಮ 7 ಜನ ಸಾವನ್ನಪ್ಪಿರುವ ಘಟನೆಯೊಂದು ವರದಿಯಾಗಿದೆ.
ಅರುಣಾಚಲ ಪ್ರದೇಶದ (Arunachal Pradesh) ಪೂರ್ವ ಕಮೆಂಗ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ – 13ರಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ವಾಹನವೊಂದು ಕೊಚ್ಚಿಹೋಗಿದ್ದು, ಇಬ್ಬರು ಮಹಿಳೆಯರು, ಇಬ್ಬರು ಮಕ್ಕಳು ಸೇರಿದಂತೆ ಏಳು ಜನ ಬಲಿಯಾಗಿದ್ದಾರೆ.
ಕಾರು ಚಲಿಸುತ್ತಿದ್ದ ಸಂದರ್ಭದಲ್ಲೇ ಭೂಕುಸಿತ ಸಂಭವಿಸಿದೆ. ಪರಿಣಾಮ ವಾಹನ ಕೊಚ್ಚಿ ಹೋಗಿದೆ. ಆ ವಾಹನದಲ್ಲಿದ್ದವರೆಲ್ಲ ಸಾವನ್ನಪ್ಪಿದ್ದಾರೆ. ಅರುಣಾಚಲ ಪ್ರದೇಶದ ಗೃಹ ಸಚಿವೆ, ಸ್ಥಳೀಯ ಶಾಸಕಿ ಮಾಮಾ ನಟುಂಗ್ ಮತ್ತು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಘಟನೆಗೆ ಸಂತಾಪ ಸೂಚಿಸಿದ್ದಾರೆ.