ಬೆಂಗಳೂರು : ‘ಸಾರಥಿ’ ಮೂಲಕ ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ್ದ ನಿರ್ಮಾಪಕರಾದ ಸತ್ಯಪ್ರಕಾಶ್ ಹಾಗೂ ಸೂರಜ್ ಗೌಡ ಕನ್ನಡಿಗರಿಗೆ ಬೇರೆಯದೇ ಜಾನರ್ ಉಣಬಡಿಸೋ ಉತ್ಸಾಹದಲ್ಲಿದ್ದಾರೆ. ‘ಲ್ಯಾಂಡ್ ಲಾರ್ಡ್’ ಚಿತ್ರದ ಟೀಸರ್ ಬಿಡುಗಡೆಯನ್ನ ಅದ್ದೂರಿಯಾಗಿ ಪ್ಲ್ಯಾನ್ ಮಾಡಿರೋ ಚಿತ್ರತಂಡ, ಪಾತ್ರಗಳನ್ನೇ ಹೈಲೇಟ್ ಮಾಡೋ ಚಿಂತನೆಯಲ್ಲಿದೆ.

ಸ್ಯಾಂಡಲ್‌ವುಡ್ ಸಲಗ ವಿಜಯ್ ಕುಮಾರ್ ಹಿಂದೆದೂ ಕಾಣದ ಗೆಟಪ್ ಎತ್ತಿದ್ದು, ಬುಲ್ ಬುಲ್ ರಚಿತಾರಾಮ್ ಕೂಡ ಗಟ್ಟಿಗಾತಿಯಾಗಿ ಈ ಸಿಮಾದಲ್ಲಿ ಎಂಟ್ರಿ ಕೊಡಲಿದ್ದಾರೆ. ಕಾಟೇರಾದಂತಹ ಹಿಟ್ ಕಥೆ ಕೊಟ್ಟ ಜಡೇಶ್ ಹಂಪಿ ಚಿತ್ರಕ್ಕೆ ಆಕ್ಷನ್-ಕಟ್ ಹೇಳ್ತಿದ್ದು, ಮಾಸ್ತಿ ಡೈಲಾಗ್ಸ್ ಮತ್ತು ಅಜನೀಶ್ ಲೋಕನಾಥ್ ಮ್ಯೂಸಿಕ್ ‘ಲ್ಯಾಂಡ್ ಲಾರ್ಡ್’ ಚಿತ್ರಕ್ಕೆ ಇಂಜಿನ್‌ಗಳೇಂದೆ ಹೇಳಬಹುದು.

iಇನ್ನು, ರಿತನ್ಯ ವಿಜಯ್, ಮಿತ್ರ, ರಾಕೇಶ್ ಅಡಿಗ, ಅಭಿದಾಸ್, ಶಿಶಿರ್ ಬೈಕಾಡಿಯಂಥ ಕಿಲ್ಲಿಂಗ್ ಕಾಸ್ಟ್ ಸಿನಿಮಾದಲ್ಲಿದೆ. ಟೀಸರ್‌ನಲ್ಲೇ ದೊಡ್ಡ ಪಟಾಕಿ ಹೊಡಿತೀವಿ ಅಂತೀರೋ ‘ಲ್ಯಾಂಡ್ ಲಾರ್ಡ್’ ಟೀಮ್, ಕನ್ನಡ ರಾಜ್ಯೋತ್ಸವಕ್ಕೆ ರಾಜಾಜಿನಗರದ ನವರಂಗ್ ಚಿತ್ರಮಂದಿರದಲ್ಲಿ ಹಬ್ಬ ಮಾಡೋಕೆ ಸಜ್ಜಾಗಿದೆ.
ಇದನ್ನೂ ಓದಿ : ನವೆಂಬರ್‌ನಲ್ಲಿ ರಾಜ್ಯಾದ್ಯಂತ “ಮೆಜೆಸ್ಟಿಕ್ 2” ಸಿನಿಮಾ ರೀಲಿಸ್



















