ಶಿವಮೊಗ್ಗ: ನಾಡಬಾಂಬ್ ಸಿಡಿದು ವೃದ್ಧೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ತೀರ್ಥಹಳ್ಳಿ ತಾಲೂಕಿನ ನಂಟೂರು ಗ್ರಾಮದಲ್ಲಿ ನಡೆದಿದೆ.
ಗಾಯಗೊಂಡ ವೃದ್ಧೆಯನ್ನು ಕಮಲಮ್ಮ (72) ಎಂದು ಗುರುತಿಸಲಾಗಿದೆ. ಹಂದಿ ಶಿಕಾರಿಗೆ ತೋಟದಲ್ಲಿ ಅಡಿಕೆಯೊಳಗೆ ನಾಡಬಾಂಬ್ ಇಡಲಾಗಿತ್ತು ಎನ್ನುವ ಶಂಕೆ ವ್ಯಕ್ತವಾಗಿದೆ. ಅದನ್ನು ನಾಯಿ ಕಚ್ಚಿಕೊಂಡು ಮನೆ ಅಂಗಳಕ್ಕೆ ತಂದಿಟ್ಟಿದ್ದು, ಅಲ್ಲಿ ಬಿದ್ದಿದ್ದ ಬಾಂಬ್ ಅನ್ನು ಮುಟ್ಟಿದ ವೇಳೆ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ಸ್ಫೋಟದ ಪರಿಣಾಮವಾಗಿ ವೃದ್ಧೆಯ ಕೈ ಹಾಗೂ ಬೆರಳುಗಳಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುವಿಗೆ ತೀರ್ಥಹಳ್ಳಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಆಗುುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಮಹಿಳಾ ಕಸ್ಟಮ್ ಅಧಿಕಾರಿ ಮೇಲೆ ನಿರಂತರ ಅತ್ಯಾಚಾರ, ಬ್ಲ್ಯಾಕ್‌ಮೇಲ್ ಆರೋಪ : ಎಂ. ಕೃಪಲಾನಿ ಅರೆಸ್ಟ್!



















