ಲಕುಮಿ, ಯಾರೇ ನೀ ಅಭಿಮಾನಿ ಧಾರಾವಾಹಿ ಖ್ಯಾತಿಯ ನಟಿ ಸುಷ್ಮಾ ಶೇಖರ್ ನಿಶ್ಚಿತಾರ್ಥ ನಡೆದಿದ್ದು, ಶುಭ ಸಮಾರಂಭದ ಫೋಟೋಗಳನ್ನ ತಮ್ಮ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ಗಟ್ಟಿಮೇಳದ ನಾದ ಜೋರಾಗಿದೆ. ಇದೀಗ ಇನ್ನೋರ್ವ ಸೀರಿಯಲ್ ನಟಿಗೆ ಕಂಕಣ ಭಾಗ್ಯ ಕೂಡಿಬಂದಿದೆ. ಲಕುಮಿ, ಯಾರೇ ನೀ ಅಭಿಮಾನಿ, ಬಳಿಕ ಗಿಣಿರಾಮ ಧಾರವಾಹಿಗಳಲ್ಲಿ ನಟಿಸಿದ ಸುಷ್ಮಾ ಶೇಖರ್ ಇತ್ತೀಚಿಗೆ ತೆರೆಮೇಲೆ ಕಾಣಿಸಿಕೊಳ್ಳುತ್ತಿರಲಿಲ್ಲ ಇದೀಗ ಮದುವೆಯ ಸುಳಿವನ್ನು ಕೊಟ್ಟಿದ್ದಾರೆ.
ಮದುವೆಯಾಗೋ ಹುಡುಗನ ಪರಿಚಯ ಗುಪ್ತವಾಗೇ ಇಟ್ಟಿರುವ ಸುಷ್ಮಾ ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. He Asked, I Said Yes ಎಂದಿದ್ದಾರೆ. ಇತ್ತೀಚೆಗಷ್ಟೇ ನಟಿ ರಜನಿ ಸೇರಿದಂತೆ ಅನೇಕರು ಮದುವೆಯಾಗಿದ್ದರು. ಇದೀಗ ಬಹುಕಾಲದ ಗೆಳೆಯನ ಜೊತೆ ನಟಿ ಸುಷ್ಮಾ ಸಪ್ತಪದಿ ತುಳಿಯುವ ಹೊಸ್ತಿಲಲ್ಲಿ ನಿಂತಿದ್ದಾರೆ.
ಇದನ್ನೂ ಓದಿ : ಬಿಹಾರದ ಅಭಿವೃದ್ಧಿಗಾಗಿ ದಣಿವರಿಯದೇ ಕೆಲಸ ಮಾಡ್ತೇವೆ – ಪ್ರಧಾನಿ ಮೋದಿ



















