ಬೆಂಗಳೂರು : ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಹಾಗೂ ಸಿ.ಟಿ.ರವಿ (C.T Ravi) ಪ್ರಕರಣವನ್ನು ವಿಧಾನ ಪರಿಷತ್‌ನ ಎಥಿಕ್ಸ್ ಕಮಿಟಿಗೆ ನೀಡಲಾಗಿದೆ ಎಂದು ಸಭಾಪತಿ ಬಸವರಾಜ್ ಹೊರಟ್ಟಿ (Bsavaraj Horatti) ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ ರವಿ – ಲಕ್ಷ್ಮಿ ಹೆಬ್ಬಾಳ್ಕರ್ ಮಧ್ಯೆ ನಡೆದಿರುವ ಗಲಾಟೆಯ ಪ್ರಕರಣದ ಬಗ್ಗೆ ರೂಲಿಂಗ್ ಕೊಟ್ಟಿದ್ದೆ. ಆದರೆ ಇಬ್ಬರೂ ಮತ್ತೆ ದೂರು ಕೊಟ್ಟಿದ್ದಾರೆ. ಆನಂತರ ಸಂಧಾನಕ್ಕೆ ಮುಂದಾಗಿದ್ದೆ. ಎರಡೂ ಕಡೆಯಿಂದ ಒಪ್ಪಿಗೆ ಬಂದಿಲ್ಲ. ಹೀಗಾಗಿ ಆ ಪ್ರಕರಣವನ್ನು ಎಥಿಕ್ಸ್ ಕಮಿಟಿಗೆ ನೀಡಲಾಗಿದೆ. ಎಥಿಕ್ಸ್ ಕಮಿಟಿ ವರದಿಯ ನಂತರ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಎಥಿಕ್ಸ್ ಕಮಿಟಿಯಲ್ಲಿ ಸಿ.ಟಿ ರವಿ ಕೂಡ ಇದ್ದರು. ಆದರೆ, ಅವರದ್ದೇ ಕೇಸ್ ಇರುವುದರಿಂದಾಗಿ ಅವರನ್ನು ಕಮಿಟಿಯಿಂದ ಹೊರ ಹಾಕಲಾಗಿದೆ. ಸದನದಲ್ಲಿ ಮುಗಿದದ್ದನ್ನ ಅಲ್ಲೇ ಮುಗಿಸಬೇಕಿತ್ತು. ಸದನ ನಡೆದಾಗ ನಡೆದಿದ್ದರೆ ಹೀಗೆ ಆಗ್ತಿರಲಿಲ್ಲ. ಸದನ ನಡಯದೇ ಇದ್ದಾಗ ಇದು ನಡೆದಿದ್ದರಿಂದಾಗಿ ದೊಡ್ಡದಾಗಿದೆ ಎಂದಿದ್ದಾರೆ.