ಬೆಂಗಳೂರು: ದಕ್ಷಿಣ ಭಾರತದ ಖ್ಯಾತ ಆಡಿಯೋ ಕ್ಯಾಟಲಾಗ್ ಕಂಪನಿ ಲಹರಿ ಮ್ಯೂಸಿಕ್ ಸ್ಥಾಪಕ ಮನೋಹರ್ ನಾಯ್ಡು 70ನೇ ಹುಟ್ಟು ಹಬ್ಬ ಆಚರಿಸಿಕೊಂಡು, ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ.
ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಟ್ವೀಟ್ ಮಾಡುವ ಮೂಲಕ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ. ಹಲವು ರಾಜಕೀಯ ಮುಖಂಡರು, ಚಲನಚಿತ್ರ ರಂಗದ ಗಣ್ಯರು, ಲಹರಿ ಮ್ಯೂಸಿಕ್, ಕುಟುಂಬಸ್ಥರು ಮನೋಹರ್ ನಾಯ್ಡು ಅವರಿಗೆ ಶುಭ ಕೋರಿದ್ದಾರೆ.
ಲಹರಿ ಮ್ಯೂಸಿಕ್ ಸ್ಥಾಪನೆಗೆ ನಿಮ್ಮ ಪಯಣವು ನಿಜವಾಗಿಯೂ ಪ್ರೇರಣಾದಾಯಕ. ಕೇವಲ 500 ರೂಪಾಯಿಗಳಿಂದ ಆರಂಭಗೊಂಡ ಈ ಸಂಸ್ಥೆ ಈಗ ದೇಶದಲ್ಲೇ ಬೃಹದಾಕಾರವಾಗಿ ಬೆಳೆದು ನಿಂತಿದೆ. 55 ವರ್ಷಗಳ ಸಂಗೀತ ಉದ್ಯಮ ಸೇವೆಯ ಮೂಲಕ, ನೀವು ಭಾರತೀಯ ಸಂಗೀತ ಲೋಕವನ್ನು ಪರಿವರ್ತಿಸಿ, ಕೋಟಿ ಕೋಟಿ ಹೃದಯಗಳಲ್ಲಿ ಮಧುರ ನಾದವನ್ನು ತುಂಬುವ ಕೆಲಸ ಮಾಡಿದ್ದೀರಿ ಎಂದು ಶುಭಕೋರಿದ್ದಾರೆ.
ನಿಮ್ಮ ಹೆಸರು ಗೌರವದ ಪ್ರತೀಕವಾಗಿದೆ ಮತ್ತು ನಿಮ್ಮ ಸಾಧನೆಗಳು ಭವಿಷ್ಯದ ಪೀಳಿಗೆಗಳಿಗೆ ಪ್ರೇರಣೆಯಾಗಿ ಉಳಿಯಲಿ. ಈ ವಿಶೇಷ ದಿನದಲ್ಲಿ ನಿಮಗೆ ಆರೋಗ್ಯ, ಸಂತೋಷ ಮತ್ತು ಇನ್ನೂ ಹೆಚ್ಚಿನ ಯಶಸ್ಸು ಲಭಿಸಲಿ ಎಂದು ಹಾರೈಸುತ್ತೇನೆ.
ನಿಮಗೆ ಇನ್ನೂ ಅನೇಕ ಯಶಸ್ವಿ ವರ್ಷಗಳು ಬರಲೆಂದು ಹೃದಯಪೂರ್ವಕವಾಗಿ ಕೋರುತ್ತೇನೆ ಎಂದು ಮನೋಹರ್ ನಾಯ್ಡು ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಸಹೋದರ ಲಹರಿ ವೇಲು ತಿಳಿಸಿದ್ದಾರೆ.