ಭಾಣಸವಾಡಿ : ಜಗನ್ನಾಥ ರಥಯಾತ್ರೆ ವೇಳೆ ಕಳ್ಳತನ ಮಾಡಿದ್ದ ಲೇಡಿ ಗ್ಯಾಂಗ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಜೂನ್ 29ರಂದು ಭಾಣಸವಾಡಿಯಲ್ಲಿ 140 ಗ್ರಾಂ ಚಿನ್ನದ ಸರ ಕದ್ದಿದ್ದರು. ಕಟರ್ ಬಳಸಿ ನಾಲ್ಕು ಜನ ಸೇರಿ ಕಳ್ಳತನ ಮಾಡಿದ್ದರು. ಆರೋಪಿಗಳನ್ನು ತಮಿಳುನಾಡು ಮೂಲದ ಯಶೋಧ, ಗಾಯತ್ರಿ, ಆಶಾ, ಪ್ರಿಯಾ ಎಂದು ಪೊಲೀಸರು ತಿಳಿಸಿದ್ದಾರೆ.

ಜನ ಸೇರುವ ಜಾಗವನ್ನೆ ಟಾರ್ಗೆಟ್ ಮಾಡುವ ಇವರು ಈ ಹಿಂದೆ ಬೆಂಗಳೂರು ಸೇರಿ ಹಲವಾರು ಜಿಲ್ಲೆಗಳಲ್ಲಿ ಕಳ್ಳತನ ಮಾಡಿದ್ದಾರೆ ಎಂದು ಪೊಲೀಸ್ ತನಿಖೆಯ ಮೂಲಕ ತಿಳಿದು ಬಂದಿದೆ.



















