ಬೆಂಗಳೂರು | ನೈಜೀರಿಯಾ ಪ್ರಜೆಯ ಡ್ರಗ್ ಡಿಲೀಂಗ್‌ಗೆ ಸಾಥ್ ಕೊಡುತ್ತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಸುಭಾಷಿಣಿ ಬಂಧಿತ ಆರೋಪಿ
ಬಾಗಲೂರು ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಆರೋಪಿ ಸುಭಾಷಿಣಿ, ನೈಜೀರಿಯನ್ ಪ್ರಜೆಯೊಬ್ಬನ ಜೊತೆ ಸೇರಿ ಡ್ರಗ್ ಡಿಲೀಂಗ್ ಮಾಡುತ್ತಿದ್ದಳು. ವಿದೇಶಿ ಪ್ರಜೆ ನೈಜೀರಿಯಾದಿಂದ ಡ್ರಗ್ ತರಿಸಿ ಸುಭಾಷಿಣಿ ಮನೆಯಲ್ಲಿ ಶೇಖರಿಸಿಟ್ಟಿದ್ದ. ಆತ ಸೂಚಿಸಿದ್ದ ವಿಳಾಸ, ಕಸ್ಟಮರ್‌ಗಳಿಗೆ ಸುಭಾಷಿಣಿ ಡ್ರಗ್ ತಲುಪಿಸುತ್ತಿದ್ದಳು.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಸಿಸಿಬಿ ಮಾದಕ ದ್ರವ್ಯ ನಿಗ್ರಹದಳದ ಅಧಿಕಾರಿಗಳು, ಸುಭಾಷಿಣಿಯನ್ನು ಬಂಧಿಸಿದ್ದಾರೆ. ಬಂಧಿತೆಯಿಂದ 2 ಕೋಟಿ ಮೌಲ್ಯದ 300 ಎಕ್ಸಿಟೆಸಿ ವಶಕ್ಕೆ ಪಡೆಯಲಾಗಿದೆ. ತೆಲೆಮರೆಸಿಕೊಂಡಿರೋ ವಿದೇಶಿ ಡ್ರಗ್ ಪೆಡ್ಲರ್‌ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ ; ರಾಮನ್ ಇನ್‌ಸ್ಟಿಟ್ಯೂಟ್‌ನಲ್ಲಿ 2 ಹುದ್ದೆಗಳ ನೇಮಕಾತಿ | ಬೆಂಗಳೂರಿನಲ್ಲೇ ಕೆಲಸ



















