ಬೆಂಗಳೂರು: ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯದಲ್ಲಿ ಬೆಂಕಿ ಅವಘಡಗಳು ಹೆಚ್ಚಾಗುತ್ತಿದ್ದು, ಆಸ್ಪತ್ರೆಯಲ್ಲಿ ಚರ್ಮದ ಕೊರತೆ ಹೆಚ್ಚಾಗುತ್ತಿದೆ.
ಬೆಂಕಿ (Fire) ಅವಘಡಗಳು ಪ್ರಕರಣಗಳು ಹೆಚ್ಚುತ್ತಿದ್ದು ಚರ್ಮ ಸುಟ್ಟ ಗಾಯಾಳುಗಳ ಸಂಖ್ಯೆ ಏರಿಕೆಯಾಗುತ್ತಿವೆ. ಸ್ಕಿನ್ ಬ್ಯಾಂಕ್ನಲ್ಲಿ (Skin Bank) ಚರ್ಮಕ್ಕೆ ಬೇಡಿಕೆ ಹೆಚ್ಚಾಗಿದೆ. ಇತ್ತೀಚೆಗೆ ಇಂತಹ ಪ್ರಕಣಗಳು ರಾಜ್ಯದಲ್ಲಿ ಹೆಚ್ಚಾಗುತ್ತಿವೆ. ಆದರೆ, ಗಾಯಾಳುಗಳ ಚಿಕಿತ್ಸೆಗೆ ಚರ್ಮ ಸಿಗುತ್ತಿಲ್ಲ. ಇದರಿಂದ, ಚರ್ಚಮಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ.
ವಿಕ್ಟೋರಿಯಾ ಆಸ್ಪತ್ರೆಯ ಸ್ಕಿನ್ ಬ್ಯಾಂಕ್ ನಲ್ಲಿ ಚರ್ಮದ ಕೊರತೆ ತುಸು ಹೆಚ್ಚಾಗಿದೆ. ಚರ್ಮ ಸಿಗದೆ ವೈದ್ಯರು ಪರದಾಡುತ್ತಿದ್ದಾರೆ. ವಿಕ್ಟೋರಿಯಾದ ಸ್ಕಿನ್ ಬ್ಯಾಂಕ್ ನಲ್ಲಿ ಶೆ. 40 ರಷ್ಟು ಚರ್ಮದ ಕೊರತೆ ಇದೆ. ಹೊಸ ಚರ್ಮ ಬರುವವರೆಗೂ ಚಿಕಿತ್ಸೆಯ ಅಗತ್ಯವಿರುತ್ತದೆ. ಆದರೆ, ಗಾಯಾಳುಗಳಿಗೆ ಚರ್ಮ ನೀಡಲು ಸ್ಕಿನ್ ಸಿಗುತ್ತಿಲ್ಲ.
ಇತ್ತೀಚೆಗೆ ಸಿಲಿಕಾನ್ ಸಿಟಿ ಅಲ್ಲದೇ, ರಾಜ್ಯದ ಇನ್ನಿತರ ಜಿಲ್ಲೆಗಳಲ್ಲಿ ಸಿಲಿಂಡರ್ ಸ್ಟೋಟ, ಬೆಂಕಿ ಅವಘಡ ಪ್ರಕರಣದಿಂದ ರೋಗಿಗಳ ಚಿಕಿತ್ಸೆಗೆ ಸಮರ್ಪಕವಾಗಿ ಚರ್ಮ ಸಿಗದೆ ವೈದ್ಯರಿಗೆ ಆತಂಕ ತಂದಿದೆ. 2016ರಲ್ಲಿ ಆರಂಭವಾದ ರಾಜ್ಯದ ಪ್ರಪ್ರಥಮ ಚರ್ಮನಿಧಿ ಬ್ಯಾಂಕ್ ವಿಕ್ಟೋರಿಯಾದಲ್ಲಿ ಸ್ಥಾಪನೆ ಮಾಡಲಾಗಿದೆ. ಆದರೆ, ಬೆಂಕಿ ಇತ್ತೀಚೆಗೆ ಬೆಂಕಿ ಅವಘಡ ಹೆಚ್ಚಾಗುತ್ತಿದ್ದು, ಚರ್ಮದಾನಿಗಳ ಸಂಖ್ಯೆ ಇಳಿಕೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ.
ಸತ್ತ ವ್ಯಕ್ತಿಯಿಂದ ಚರ್ಮವನ್ನು ದಾನವಾಗಿ ಪಡೆಯಬಹುದು. ಸತ್ತ 6 ಗಂಟೆಯ ಒಳಗೆ ಚರ್ಮ ಸಂಗ್ರಹ ಮಾಡಬೇಕಿದ್ದು, ಈ ವೇಳೆ ಹಲವರಿಗೆ ಚರ್ಮದಾನದ ಕುರಿತು ಅರಿವು ಇಲ್ಲದಿರುವುದು ಕೂಡ ಈ ಕೊರತೆಗೆ ಕಾರಣವಾಗುತ್ತಿದೆ. ಚರ್ಮವನ್ನು 18 ವರ್ಷ ಮೇಲ್ಪಟ್ಟ ವ್ಯಕ್ತಿಗಳು ಸತ್ತ ಬಳಿಕ ಚರ್ಮ ದಾನ ಮಾಡಬಹುದು. HIV, HBSAG, ಚರ್ಮದ ಕ್ಯಾನ್ಸರ್ ಇಲ್ಲದವರು ದಾನ ಮಾಡಬಹುದು. ಯಾವುದೇ ರೀತಿ ಚರ್ಮ ಕಾಯಿಲೆ ಇಲ್ಲದವರು ದಾನಿಯಾಗಬಹುದು
ಒಟ್ಟಿನಲ್ಲಿ ಜನರು ಜಾಗೃತರಾಗಬೇಕಿದೆ. ಸತ್ತು ಮಣ್ಣು ಸೇರುವ ದೇಹ, ಬದುಕಿರುವವರ ಬಾಳಿಗೆ ಬೆಳಕು ನೀಡಲಿ ಚರ್ಮ ದಾನ ಮಾಡುವ ಕಡೆ ಜನರು ಮನಸ್ಸು ಮಾಡಬೇಕಿದೆ ಎಂಬುವುದೇ ವೈದ್ಯರ ಆಶಯವಾಗಿದೆ.