ಬಾಂಗ್ಲಾದೇಶ ಹಾಗೂ ಪಾಕಿಸ್ತಾನ್ ಮಧ್ಯೆ ಟೆಸ್ಟ್ ಸರಣಿಯು ಆಗಸ್ಟ್ 21 ರಿಂದ ಆರಂಭವಾಗಲಿದೆ. ತವರಿನಲ್ಲಿ ನಡೆಯಲಿರುವ ಈ ಪಂದ್ಯ ವೀಕ್ಷಿಸಲು ಪ್ರೇಕ್ಷಕರೇ ಇಲ್ಲದಾಗಿದೆ. ಹೀಗಾಗಿ ಪಾಕ್ ಕ್ರಿಕೆಟ್ ಮಂಡಳಿಗೆ ಆತಂಕ ಶುರುವಾಗಿದೆ. ಈ ನಿಟ್ಟಿನಲ್ಲಿ ಟೆಸ್ಟ್ ಕ್ರಿಕೆಟ್ ಪಂದ್ಯಗಳ ಟಿಕೆಟ್ ದರವನ್ನು ಇಳಿಕೆ ಮಾಡಲಾಗಿದ್ದು, ಟಿಕೆಟ್ ದರ ಕೇವಲ 15 ರೂ.ಗೆ ಇಳಿಸಲಾಗಿದೆ.
ಕರಾಚಿಯಲ್ಲಿ ನಡೆಯಲಿರುವ ಪಾಕಿಸ್ತಾನ್ ಮತ್ತು ಬಾಂಗ್ಲಾದೇಶ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಟಿಕೆಟ್ ದರವನ್ನು ಘೋಷಿಸಲಾಗಿದೆ. ಈ ಪಂದ್ಯದ ಸಾಮಾನ್ಯ ಟಿಕೆಟ್ ಕೇವಲ ಕೇವಲ 15 ರೂ. (PKR 50 ರೂ.) ಗೆ ಮಾರಾಟವಾಗಲಿದೆ. 2024ರ ಪಾಕಿಸ್ತಾನ್ ಸೂಪರ್ ಲೀಗ್ (PSL) ವೇಳೆ ಸ್ಟೇಡಿಯಂಗಳಲ್ಲಿ ಪ್ರೇಕ್ಷಕರ ಕೊರತೆ ಕಂಡು ಬಂದಿತ್ತು. ಎಲಿಮಿನೇಟರ್ ಅಥವಾ ಫೈನಲ್ ಪಂದ್ಯಗಳಲ್ಲಂತೂ ಪ್ರೇಕ್ಷಕರೇ ಇರಲಿಲ್ಲ. ಹೀಗಾಗಿ ಟಿಕೆಟ್ ದರ ಇಳಿಕೆಯಾಗಲು ಮುಖ್ಯ ಕಾರಣವಾಗಿದೆ. ಏಷ್ಯಾ ಕಪ್ ಕೂಡ ಖಾಲಿ ಸ್ಟೇಡಿಯಂಗಳಿಗೆ ಸಾಕ್ಷಿಯಾಗಿತ್ತು.
ಟೆಸ್ಟ್ ಪಂದ್ಯಗಳಿಗೂ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಪಿಸಿಬಿ ಈ ನಿರ್ಧಾರಕ್ಕೆ ಬಂದಿದೆ. ಈ ಸಮಸ್ಯೆ ಸರಿದೂಗಿಸಲು 50 ಪಿಕೆ ರೂ.ಗೆ (ಭಾರತದ 15 ರೂ.) ಟಿಕೆಟ್ ಗಳನ್ನು ಮಾರಾಟ ಮಾಡಲು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಮುಂದಾಗಿದೆ. ಅಲ್ಲದೇ, ಐದು ದಿನದಾಟದ ಟಿಕೆಟ್ ನ್ನು ಖರೀದಿಸುವವರಿಗೆ ವಿಶೇಷ ರಿಯಾಯಿತಿಯನ್ನು ಸಹ ಘೋಷಿಸಿದೆ. ಅದರಂತೆ ಪೂರ್ಣ ಐದು ದಿನಗಳವರೆಗೆ ಕ್ರಿಕೆಟ್ ವೀಕ್ಷಿಸಲು ಬಯಸಿದರೆ, ಅವರು ಕೇವಲ 72 ರೂ.ಗೆ (PKR 215) ಪಾಸ್ ನೀಡಲಾಗುತ್ತಿದೆ. ಪಾಕ್ ನ ಈ ತಂತ್ರಕ್ಕೂ ಸ್ಟೇಡಿಯಂ ಫುಲ್ ಆಗಲಿದೆಯೇ ಕಾಯ್ದು ನೋಡಬೇಕಿದೆ.