ರಾಯಚೂರು : ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಸ್ಲೀಪರ್ ಬಸ್ ಪಲ್ಟಿಯಾಗಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ತುಗ್ಗಿಲಿಮಂಡಲಂನ ರಾತನ ಗ್ರಾಮ ಬಳಿ ಹೊಡೆದಿದೆ.
ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೊರಟಿದ್ದ ಬಸ್‌ನ ಸ್ಟೇರಿಂಗ್ ಕತ್ತರಿಸಿ ಚಾಲಕನ ನಿಯಂತ್ರಣ ತಪ್ಪಿದ್ದು, ಪರಿಣಾಮ ಪಲ್ಟಿ ಹೊಡೆದು ಪಕ್ಕದ ಜಮೀನಿಗೆ ಉರುಳಿದೆ. ಬಸ್‌ನಲ್ಲಿದ್ದ 29 ಜನರ ಪೈಕಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಆಂಧ್ರಪ್ರದೇಶದ ತುಗ್ಗಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೂರ ಪ್ರಯಾಣದ ಬಸ್‌ಗಳಿಗೆ ಒಬ್ಬರೇ ಚಾಲಕರು ಇರುವುದರಿಂದ ಅಪಘಾತಗಳು ಹೆಚ್ಚಾಗುತ್ತವೆ. ಬೆಂಗಳೂರು-ಮಂತ್ರಾಲಯ-ರಾಯಚೂರು ಬಸ್‌ಗಳಿಗೆ ಇಬ್ಬರು ಪ್ರಯಾಣಿಕರನ್ನ ಒದಗಿಸಬೇಕು. ಇದರಿಂದ ಅಪಘಾತಗಳನ್ನ ತಪ್ಪಿಸಲು ಸಾಧ್ಯ ಅಂತ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಶೇಖರ್ ಅಭಿಪ್ರಾಯ ತಿಳಿಸಿದ್ದಾರೆ.
ಇದನ್ನೂ ಓದಿ : ನಾವಿಬ್ಬರು ಒಂದಾಗಿದ್ದೇವೆ, ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ | ಸಿಎಂ-ಡಿಸಿಎಂ ಒಗ್ಗಟಿನ ಸಂದೇಶ



















