ಬಳ್ಳಾರಿ | KSRTC ಸಾರಿಗೆ ಬಸ್‌ನ ಬ್ರೇಕ್ ಫೇಲ್ ಆದ ಕಾರಣ ಚಾಲಕನ ನಿಯಂತ್ರಣ ತಪ್ಪಿದ ಬಸ್ ವೇಗವಾಗಿ ಸಾಗಿ, ರಸ್ತೆ ಬದಿಯಲ್ಲಿದ್ದ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದು, ಸ್ಥಳದಲಿದ್ದ ಫ್ರೂಟ್ಸ್ ಅಂಗಡಿ ಗುದ್ದಿ, ಬಳಿಕ ಟೀ ಅಂಗಡಿಯೊಳಗೆ ನುಗ್ಗಿದ ಘಟನೆ ನಗರದ ಮೋತಿ ವೃತ್ತದ ಬಳಿ ನಡೆದಿದೆ.
ಬಸ್ ಡಿಕ್ಕಿಯಾದ ರಭಸಕ್ಕೆ ಫ್ರೂಟ್ಸ್ ಅಂಗಡಿ ಸಂಪೂರ್ಣವಾಗಿ ಜಖಂಗೊಂಡಿದೆ. ಅಲ್ಲದೆ, ಅಪಘಾತಕ್ಕೆ ಸಿಲುಕಿದ ಆಟೋರಿಕ್ಷಾ ಕೂಡ ನಜ್ಜುಗುಜ್ಜಾಗಿದೆ. ಘಟನೆಯಿಂದಾಗಿ ಸ್ಥಳದಲ್ಲಿ ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅದೃಷ್ಟವಶಾತ್ ಯಾರಿಗೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ವಿಷಯ ತಿಳಿಯುತ್ತಿದ್ದಂತೆ ಬಳ್ಳಾರಿ ನಗರ ಸಂಚಾರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ ; ಟಾಟಾ ಪಂಚ್‌ಗೆ ಟಕ್ಕರ್ ನೀಡಲು ಅಗ್ಗದ ‘ಲೈವ್’ ವೇರಿಯಂಟ್ ಪರಿಚಯಿಸಿದ ಸಿಟ್ರನ್!


















