ತುಮಕೂರು: ಶಿರಾ ಹೊರವಲದ NH48 ರಸ್ತೆಯಲ್ಲಿ ಇಂದು ಬೆಳಗ್ಗೆ ಸುಮಾರು 3.30ರ ಸುಮಾರಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ರಸ್ತೆ ಬದಿಯಲ್ಲಿ ನಿಂತಿದ್ದ ಖಾಸಗಿ ಸುಗಮ ಟ್ರಾವೆಲ್ಸ್ ಬಸ್‌ಗೆ ಹಿಂದಿನಿಂದ ಕೆ.ಎಸ್.ಆರ್.ಟಿ.ಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ದುರ್ಘಟನೆಯಲ್ಲಿ ಸುಗಮ ಬಸ್‌ನಲ್ಲಿ ಇದ್ದ ಪ್ರವೀಣ್ ಕೃಷ್ಣಪ್ಪ (20), ಶಿಗ್ಗಾವಿ ಮೂಲದವರು ಮತ್ತು ಸಂಗೀತ (17), ರೋಣ ತಾಲ್ಲೂಕು, ಚೌಡಿಗ್ರಾಮ ಮೂಲದವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೆ.ಎಸ್.ಆರ್.ಟಿ.ಸಿ ಬಸ್‌ನಲ್ಲಿದ್ದ ಹತ್ತಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಅವರಿಗೆ ಶಿರಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅಪಘಾತದ ದೃಶ್ಯ ಇನ್ನೊಂದು ಬಸ್, ಗುರುಶಕ್ತಿ ಬಸ್ನ ಡ್ಯಾಶ್ ಕ್ಯಾಮೆರಾದಲ್ಲಿಯೂ ಸೆರೆಹಿಡಿಯಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಸುಗಮ ಬಸ್ ಚಾಲಕ ಯಾವುದೇ ರಿಫ್ಲೆಕ್ಟರ್ ಹಾಕದೇ ಏಕಾಏಕಿ ರಸ್ತೆ ಬದಿಯಲ್ಲಿ ನಿಂತಿದ್ದ ಕಾರಣ ಅಪಘಾತಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಬೆಂಗಳೂರು ಕಡೆ ತೆರಳುತ್ತಿದ್ದ ಬಸ್‌ಗಳು ಅಪಘಾತದ ಸಮಯದಲ್ಲಿ ಅದರ ಪಕ್ಕದಲ್ಲಿ ಸಾಗುತ್ತಿದ್ದು, ಅಪಾಯದಿಂದ ತಪ್ಪಿಸಿಕೊಂಡಿವೆ.
ಇದನ್ನೂ ಓದಿ : ಲಾರಿ-ಕಾರು ಮುಖಾಮುಖಿ ಡಿಕ್ಕಿ – ಸ್ಥಳದಲ್ಲೇ ಇಬ್ಬರು ದುರ್ಮರಣ



















