ಬೆಂಗಳೂರು : ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಕುಲಪತಿ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆ (KSOU Recruitment 2026) ಹೊರಡಿಸಲಾಗಿದೆ. ಅರ್ಹ ಹಾಗೂ ಆಸಕ್ತಿ ಹೊಂದಿರುವ ಪ್ರಾಧ್ಯಾಪಕರು ಆಫ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ, ಅರ್ಹತಾ ಮಾನದಂಡಗಳು ಸೇರಿ ನೇಮಕಾತಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಇಲ್ಲಿದೆ.
ಹುದ್ದೆಗಳ ಸಂಕ್ಷಿಪ್ತ ಮಾಹಿತಿ
ನೇಮಕಾತಿ ಸಂಸ್ಥೆ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ರಾಜ್ಯಪಾಲರಿಂದ ನೇಮಕ)
ಒಟ್ಟು ಹುದ್ದೆಗಳು: 31
ಹುದ್ದೆಗಳ ಹೆಸರು: ಕುಲಪತಿ
ಉದ್ಯೋಗ ಸ್ಥಳ: ಮೈಸೂರು
ಅರ್ಹ ಪ್ರಾಧ್ಯಾಪಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಿಶ್ವವಿದ್ಯಾಲಯ ಧನ ಸಹಾಯಗಳ ಆಯೋಗದ ಮಾರ್ಗಸೂಚಿಗಳು ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಅಧಿನಿಯಮ, 1992 ರನ್ವಯ ಕನಿಷ್ಠ 10 ವರ್ಷಗಳ ಕಾಲ ಪ್ರಾಧ್ಯಾಪಕರ ಅಥವಾ ತತ್ಸಮಾನ ಹುದ್ದೆಯ ಕಾರ್ಯಾನುಭವ ಹೊಂದಿರಬೇಕು ಎಂದು ತಿಳಿಸಲಾಗಿದೆ.
ವಿದ್ಯಾರ್ಹತೆ, ಸಂಶೋಧನೆ, ಶೈಕ್ಷಣಿಕ ಮತ್ತು ಆಡಳಿತಾತ್ಮಕ ಅನುಭವ ಇತ್ಯಾದಿ ವಿವರಗಳೊಂದಿಗೆ ವೆಬ್ ಸೈಟ್ www.ksoumysuru.ac.in ನಲ್ಲಿ ಲಭ್ಯವಿರುವ ನಿಗದಿತ ಅರ್ಜಿ ನಮೂನೆಯಲ್ಲಿ ಸ್ವಯಂಘೋಷಣೆಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಅರ್ಜಿಗಳನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸಬೇಕಾದ ವಿಳಾಸ
ರಾಜ್ಯಪಾಲರ ವಿಶೇಷ ಕಾರ್ಯದರ್ಶಿ, ಪಿ.ಬಿ. ನಂ. 5033, ಲೋಕ ಭವನ, ಬೆಂಗಳೂರು-560001. ಮೇ 10ರ ಸಂಜೆ 5.30ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕು ಎಂದು ತಿಳಿಸಲಾಗಿದೆ. ಹಾಗೆಯೇ, ಅರ್ಜಿ ನಮೂನೆ ಹಾಗೂ ದಾಖಲೆಗಳ ಸಾಫ್ಟ್ ಕಾಪಿಗಳನ್ನು us.university.rb@karnataka.gov.in ಗೆ ಮೇಲ್ ಮಾಡಬಹುದು.
ಇದನ್ನೂ ಓದಿ : ರೈತನಿಗೆ ಧಮ್ಕಿ ಆರೋಪ | ತಹಶೀಲ್ದಾರ್ ಡಾ.ಸ್ಮಿತಾರಾಮು ವಿರುದ್ದ ದೂರು



















